Slide
Slide
Slide
previous arrow
next arrow

ಮುಖ್ಯರಸ್ತೆ ಮೇಲೆ ನಿಲ್ಲುವ ಎಸ್‌ಬಿಐ ಗ್ರಾಹಕರ ವಾಹನಗಳು; ಸಂಚಾರಕ್ಕೆ ತೊಂದರೆ

300x250 AD

ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ಸಾಕಷ್ಟು ಪ್ರಮಾಣದಲ್ಲಿ ಜನದಟ್ಟಣೆ ಸೇರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬ್ಯಾಂಕ್‌ಗೆ ಬರುವ ಗ್ರಾಹಕರು ರಸ್ತೆಯಲ್ಲೇ ವಾಹನಗಳನ್ನ ನಿಲ್ಲಿಸುವುದರಿಂದ ವಾಹನಗಳ ಸಂಚಾರಕ್ಕೂ ಅಡಚಣೆಯುಂಟಾಗಿದೆ.

ಇತ್ತೀಚಿಗೆ ಪುರಸಭೆ ಮತ್ತು ಪೊಲೀಸ್ ಇಲಾಖೆ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಹಲವು ದಿನಗಳಿಂದ ಇಲ್ಲಿನ ಪುರಸಭೆ ಅನಧಿಕೃತವಾಗಿ ಹೂಡಲಾಗಿದ್ದ ಗೂಡಂಗಡಿಗಳ ತೆರವು ಕಾರ್ಯಚರಣೆ ಕೈಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿತ್ತು. ಆದರೆ ಎಸ್‌ಬಿಐ ಬಳಿಯೂ ಇದೇ ಪರಿಸ್ಥಿತಿ ಇದ್ದು, ಇಲ್ಲಿಯೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ವ್ಯವಸ್ಥೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.

300x250 AD

ಎಸ್‌ಬಿಐ ಸಮೀಪವೇ ಬಸ್ ನಿಲ್ದಾಣ ಹಾಗೂ ಆಸ್ಪತ್ರೆ ಇದ್ದು, ವಿದ್ಯಾರ್ಥಿಗಳು ಹಾಗೂ ರೋಗಿಗಳು ಹೆಚ್ಚಾಗಿ ಈ ಭಾಗದಲ್ಲಿ ಓಡಾಟ ನಡೆಸುತ್ತಾರೆ. ಅಲ್ಲದೇ ಬ್ಯಾಂಕ್‌ಗೆ ಬರುವವರ ಸಂಖ್ಯೆ ಕೂಡ ಇವರಷ್ಟೇ ಇದ್ದು, ಬ್ಯಾಂಕ್‌ನ ಹತ್ತಿರ ಯಾವುದೇ ಪಾರ್ಕಿಂಗ್ ಸೌಲಭ್ಯ ಇಲ್ಲದೇ ಇರುವುದರಿಂದ ಗ್ರಾಹಕರು ವಾಹನಗಳನ್ನು ಮುಖ್ಯ ರಸ್ತೆಯ ಮೇಲೆ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ಬಸ್ ನಿಲ್ದಾಣಕ್ಕೆ ಹೋಗಿ- ಬರುವ ಬಸ್‌ಗಳಿಗೆ, ರಸ್ತೆಯಲ್ಲಿ ಸಂಚರಿಸುವ ನಾಲ್ಕು ಚಕ್ರದ ವಾಹನಗಳು, ಮೋಟಾರ್ ಸೈಕಲ್ ಹಾಗೂ ತುರ್ತು ಅಂಬ್ಯುಲೆನ್ಸ್ಸ್ಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಅಥವಾ ಬ್ಯಾಂಕನ್ನೇ ಸ್ಥಳಾಂತರಿಸಬೇಕೆAಬುದು ಸ್ಥಳೀಯರ ಆಗ್ರಹವಾಗಿದೆ.

Share This
300x250 AD
300x250 AD
300x250 AD
Back to top