ಹಳಿಯಾಳ: 2023- 24ನೇ ಸಾಲಿನ ಉತ್ತರಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿ.ಡಿ.ಹೆಗಡೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ. ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ನಡೆದಂತಹ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿ.ಡಿ.ಹೆಗಡೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜ್ಞಾನೇಶ್ವರ ಹಳದೂಳಕರ 1500 ಮೀ ಪ್ರಥಮ ಗುಡ್ಡಗಾಡು ಓಟದಲ್ಲಿ ಓಟದಲ್ಲಿ ತೃತೀಯ ಸ್ಥಾನ, ನಾಗರಾಜ ಮೇತ್ರಿ 6 ನೇ ಸ್ಥಾನ. ಕುಸ್ತಿಯಲ್ಲಿ ದರ್ಶನ್ ಮೇತ್ರಿ, ಜ್ಞಾನೇಶ್ವರ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ಕಬಡ್ಡಿಆಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಡಿ.ಹೆಗಡೆ & ಕಾರ್ಯಾಧ್ಯಕ್ಷ ಸುನಿಲ ಹೆಗಡೆ ಮತ್ತು ಶ್ರೀಪತಿ ಭಟ್, ನಿತಿನ್ ದೇಶಪಾಂಡೆ ಹಾಗೂ ಸದಸ್ಯ ವರ್ಗ, ಪ್ರಾಚಾರ್ಯರು ಮತ್ತು ಉಪನ್ಯಾಸಕರ ವರ್ಗ ತುಂಬು ಹೃದಯದ ಅಭಿನಂದನೆಗಳನ್ನು ಕೋರಿದ್ದಾರೆ.