Slide
Slide
Slide
previous arrow
next arrow

ಹೃದಯಾಘಾತದಿಂದ ಕಣ್ಣು ಮುಚ್ಚಿದ ಖ್ಯಾತ ಕಣ್ಣಿನ ವೈದ್ಯ ಡಾ.ಯು.ಕೆ.ಅವಧಾನಿ

300x250 AD

ಹೊನ್ನಾವರ: ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ, ಜಿಲ್ಲೆಯಲ್ಲಿಯೇ ತಮ್ಮ ಸೇವೆಯ ಮೂಲಕ ಖ್ಯಾತಿ ಪಡೆದಿದ್ದ ಹೊನ್ನಾವರದ ಖ್ಯಾತ ಕಣ್ಣಿನ ವೈದ್ಯ ಡಾ.ಯು.ಕೆ.ಅವಧಾನಿ ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಡಾ.ಯು‌.ಕೆ ಅವಧಾನಿಯವರು ಹೊನ್ನಾವರದ ಕರ್ಕಿ ಮೂಲದವರಾಗಿದ್ದು, ಹೊನ್ನಾವರದಲ್ಲಿಯೇ ಸದ್ಯ ವಾಸವಾಗಿದ್ದರು. ಆದರೂ ಸಹ ಹೊನ್ನಾವರ ಹೊರತುಪಡಿಸಿ, ತಮ್ಮ ಮೂಲ ಊರಾದ ಕರ್ಕಿಗೂ ಪ್ರತಿನಿತ್ಯ ಭೇಟಿ ನೀಡಿ, ಅಲ್ಲಿನ ಅನಾರೋಗ್ಯ ಪೀಡಿತರಿಗೆ ಆರೈಕೆ ಮಾಡುತ್ತಿದ್ದರು. ಅಲ್ಲದೇ ಯಾರೇ ಬಡವರು ಹಣವಿಲ್ಲದೇ ಬಂದರೂ ಸಹ ಮನಃಪೂರ್ವಕವಾಗಿ ಚಿಕಿತ್ಸೆ ನೀಡುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ಇವರು ನೀಡುತ್ತಿದ್ದ ಚಿಕಿತ್ಸೆ ಸ್ಮರಣೀಯ. 

300x250 AD

ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹೊನ್ನಾವರದಾದ್ಯಂತ ಮೌನ ಆವರಿಸಿದೆ. ಇವರ ನಿಧನಕ್ಕೆ ಸಚಿವ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಇವರ ಆತ್ಮಕ್ಕೆ ಶಾಂತಿ ಕೋರಿ, ಸಂತಾಪ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top