Slide
Slide
Slide
previous arrow
next arrow

ಅ.6ರಿಂದ ಯಕ್ಷಾಮೃತ ಸರಣಿ-4 ಯಕ್ಷಗಾನ ಕಾರ್ಯಕ್ರಮ

300x250 AD

ಶಿರಸಿ: ನಗರದ ಟಿ.ಎಂ.ಎಸ್. ಸಭಾಭವನದಲ್ಲಿ ಅ.6 ರಿಂದ 9 ರವರೆಗೆ ನಾಲ್ಕು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6-30 ರಿಂದ ಸಂಜೆ 9 ಘಂಟೆವರೆಗೆ ಯಕ್ಷಾಮೃತ ಸರಣಿ- 4 ವಿಶೇಷ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಹಿಲ್ಲೂರ ಯಕ್ಷಮಿತ್ರ ಬಳಗ ಶಿರಸಿ ಹಾಗೂ ಶ್ರೀಪ್ರಭಾ ಸ್ಟುಡಿಯೋ ಇವುಗಳ ಸಹಭಾಗಿತ್ವದಲ್ಲಿ ಸಂಘಟಿತಗೊಂಡ ಯಕ್ಷಾಮೃತದಲ್ಲಿ ಆರಂಭಿಕ ದಿನವಾಗಿ ಶ್ರೀರಾಮ ಪಟ್ಟಾಭಿಷೇಕ, ಎರಡನೇ ದಿನ ಶ್ರೀಕೃಷ್ಣ ಪರಂಧಾಮ, ಮೂರನೆ ದಿನ ಸಮರ ಸೌಗಂಧಿಕಾ, ಹಾಗೂ ಕೊನೆಯ ದಿನವಾಗಿ ಪುರುಷಾಮೃಗ – ಅಗ್ರಪೂಜೆಯೆಂಬ ಪ್ರಸಂಗಗಳು ಪ್ರದರ್ಶಿತಗೊಳ್ಳಲಿವೆ.

ಪ್ರತಿದಿನ ಯಕ್ಷಗಾನದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ಕೊನೆಯ ದಿನದ ಪ್ರಸಂಗದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಪಾಲ್ಗೊಳ್ಳಲಿದ್ದಾರೆ. ಇನ್ನುಳಿದಂತೆ ಹಿಮ್ಮೇಳದಲ್ಲಿ ಮದ್ದಲೆಯಲ್ಲಿ ಶಂಕರ ಭಾಗವತ, ಪರಮೇಶ್ವರ ಭಂಡಾರಿ ಕರ್ಕಿ, ಅನಿರುದ್ಧ ಹೆಗಡೆ ವರ್ಗಾಸರ, ಹಾಗೂ ಸುನೀಲ ಭಂಡಾರಿ ಕಡತೋಕ ಭಾಗವಹಿಸಲಿದ್ದು, ಚಂಡೆವಾದನದಲ್ಲಿ ಪ್ರಸನ್ನ ಹೆಗ್ಗಾರ ಸಹಕರಿಸಲಿದ್ದಾರೆ.

300x250 AD

ಮುಮ್ಮೇಳದ ಪಾತ್ರಧಾರಿಗಳಾಗಿ ಆಯಾ ದಿನದ ಪ್ರಸಂಗಕ್ಕೆ ಅನುಗುಣವಾಗಿ ಕೃಷ್ಣ ಯಾಜಿ ಬಳ್ಕೂರು, ರಾಮಚಂದ್ರ ಹೆಗಡೆ ಕೊಂಡದಕುಳಿ, ಗಣಪತಿ ಹೆಗಡೆ ತೋಟಿಮನೆ, ಶಂಕರ ಹೆಗಡೆ ನಿಲ್ಕೋಡ್, ಅಶೋಕ ಭಟ್ಟ ಸಿದ್ದಾಪುರ, ಶ್ರೀಧರ ಹೆಗಡೆ ಚಪ್ಪರಮನೆ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಕಾರ್ತಿಕ ಚಿಟ್ಟಾಣಿ, ಸನ್ಮಯ ಭಟ್ಟ ಮಲವಳ್ಳಿ, ದೀಪಕ ಭಟ್ಟ ಕುಂಕಿ, ಮಹಾಬಲೇಶ್ವರ ಗೌಡ, ವಿನಯ ಭಟ್ಟ ಬೇರೊಳ್ಳಿ, ನಾಗರಾಜ ಭಟ್ಟ ಕುಂಕುಪಾಲ, ಸಂಜಯ ಬಿಳಿಯೂರು, ಮಂದಾರ್ತಿ ಪ್ರಸನ್ನ ಶೆಟ್ಟಿಗಾರ, ರಾಜೇಶ ಭಂಡಾರಿ ಗುಣವಂತೆ, ಚಂದ್ರಹಾಸ ಗೌಡ ಹೊಸಪಟ್ಟಣ, ನಿರಂಜನ ಹೆಗಡೆ ಜಾಗ್ನಳ್ಳಿ, ಅಶ್ವಿನಿ ಕೊಂಡದಕುಳಿ, ಮಂಜುನಾಥ ಹೆಗಡೆ ಹಿಲ್ಲೂರ್ ಪಾಲ್ಗೊಳ್ಳಲಿದ್ದಾರೆ.

ಯಾವುದೇ ಸಭಾ ಕಾರ್ಯಕ್ರಮವಿಲ್ಲದೇ ನಿಗದಿತ ವೇಳೆಗೆ ಆರಂಭಗೊಳ್ಳುವ ಯಕ್ಷಾಮೃತ ಸರಣಿ– 4 ಕ್ಕೆ ಪ್ರವೇಶ ದರವಿರುತ್ತಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರಿಸಬೇಕಾಗಿ ಸಂಘಟಕರಾದ ರಾಮಕೃಷ್ಣ ಹೆಗಡೆ ಹಿಲ್ಲೂರ, ಪ್ರಸನ್ನ ಹೆಗ್ಗಾರ್ ಪ್ರಕಟಣೆ ನೀಡಿದ್ದಾರೆ.

Share This
300x250 AD
300x250 AD
300x250 AD
Back to top