Slide
Slide
Slide
previous arrow
next arrow

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಗ್ರಾಮಸ್ಥರ ಸನ್ಮಾನ

300x250 AD

ಕುಮಟಾ: ಸರಕಾರಿ ಶಾಲಾ ವಿದ್ಯಾರ್ಥಿಗಳು ಇಂಗ್ಲೀಷ ಭಾಷೆಯಲ್ಲಿ ಪ್ರೌಢಿಮೆ ಸಾಧಿಸುವಂತೆ ಮಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದತ್ತಾತ್ರಯ ಪಂಡಿತ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಊರ ನಾಗರಿಕರೆಲ್ಲ ಸೇರಿ ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಟ್ಟರು.

ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲೀಷ ಭಾಷೆಯನ್ನು ಸುಲಲಿತವಾಗಿ ಧಾರೆಯೆರೆದು ತನ್ಮೂಲಕ ನಿರರ್ಗಳವಾಗಿ ಇಂಗ್ಲೀ಼ಷನಲ್ಲಿ ಮಾತನಾಡುವ ಕಲೆಯನ್ನು ಕರಗತಗೊಳಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿಸುವಲ್ಲಿ ಮಹತ್ತರವಾದ ಸಾಧನೆಗೈದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದತ್ತಾತ್ರಯ ಪಂಡಿತ ವತು 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಅವರನ್ನು ಗೌರವಯುತವಾಗಿ ಬೀಳ್ಕೊಡುವ ಹೃದಯ ಸ್ಪರ್ಶಿ ಸಮಾರಂಭವು ಮಿರ್ಜಾನದ ರಾಮಕ್ಷತ್ರೀಯ ಸಭಾಭವನದಲ್ಲಿ ಜರುಗಿತು.

ಶಿಕ್ಷಕ ದತ್ತಾತ್ರಯ ಪಂಡಿತರನ್ನು ಶಿಕ್ಷಣ ಅಧಿಕಾರಿಯ ಜೊತೆ ನಗಾರಿ, ಪಂಚವಾದ್ಯದೊAದಿಗೆ ಸಿಡಿಮದ್ದುಗಳನ್ನು ಸಿಡಿಸಿ ಮೆರವಣಿಗೆಯಲ್ಲಿ ವೇದಿಕೆಯ ಮೇಲೆ ಕರೆತರಲಾಯಿತ. ಈ ವೇಳೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಇವರ ಗರಡಿಯಲ್ಲಿ ಪಳಗಿದ ಅನೇಕ ವಿದ್ಯಾರ್ಥಿಗಳು ಬೆಂಗಳೂರು ಸೇರಿದಂತೆ ದೂರ ದೂರದ ಊರುಗಳಲ್ಲಿ ಸರಕಾರಿ ಸೇವೆ ಸಲ್ಲಿಸುತ್ತಿದ್ದು ಕೆಲವರು ಹೈಸ್ಕೂಲ, ಪದವಿ ಕಲಿಯುತ್ತಿದ್ದರೂ ಸ್ವಯಂಪ್ರೇರಿತರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನಿಸಿ ನಮಸ್ಕರಿಸಿ, ಗೌರವ ಸಲ್ಲಿಸಿದ್ದು ಹುಬ್ಬೇರುವಂತೆ ಮಾಡಿತು. ಪುಟಾಣಿಗಳು ಕನ್ನಡ ಇಂಗ್ಲೀಷನಲ್ಲಿ ಅನಿಸಿಕೆ ಹೇಳುತ್ತ ಗದ್ಗದಿತರಾದರು.

ಶಾಲಾ ಸಮಿತಿ ಅಧ್ಯಕ್ಷ ಸಂತೋಷ ವಿ.ನಾಯ್ಕ ಹಾಗೂ ಶಿಕ್ಷಣಾಧಿಕಾರಿಗಳು ಪಂಡಿತ ಶಿಕ್ಷಕರ ಹಿರಿಯ ಸಹೋದರ ಪ್ರಥಮ ದಜೆ ಗುತ್ತಿಗೆದಾರ ಸುಧೀರ ಪಂಡಿತ ಹಾಗೂ ಗೆಳೆಯರು ಸೇರಿ ಸನ್ಮಾನಿಸಿದರು. ಅನಂತರ ನೂರರಷ್ಟು ವಿದ್ಯಾರ್ಥಿಗಳು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಡಿ.ಜಿ.ಪಂಡಿತ ಮಾತನಾಡಿ, ಸತ್ಯ, ಪ್ರಾಮಾಣಿಕತೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವವರಿಗೆ ದೇವರ ಕೃಪೆ ಸದಾ ಇರುತ್ತದೆ ಎಂಬುದಕ್ಕೆ ಅನೇಕ ದೃಷ್ಟಾಂತ ಸಮೇತ ವಿವರಿಸಿದ ಅವರು ನಾನು ಮಿರ್ಜಾನ ಹೈಸ್ಕೂಲಿನ ವಿದ್ಯಾರ್ಥಿಯಾದರಿಂದ ಊರಿನ ಋಣ ತೀರಿಸಲು ದೈವಿ ಶಕ್ತಿಯೇ ಪ್ರೇರಣೆ. ನನಗೆ ರಾಜ್ಯ ಪ್ರಶಸ್ತಿ ದೊರೆತದ್ದು ಯಾವುದೇ ವಸೂಲಾತಿಯಲ್ಲಿ ವಿದ್ಯಾರ್ಥಿಗಳ, ಪಾಲಕರ, ಶಿಕ್ಷಣಾಧಿಕಾರಿ, ರಾಜಕಾರಣಿಗಳ ಇಚ್ಛಾಶಕ್ತಿಯ ಜೊತೆ ದೈವಿ ಶಕ್ತಿಯೇ ಕಾರಣವೆಂದು ಭಾವುಕರಾಗಿ ನುಡಿದರು.

300x250 AD

ಕುಮಟಾದ ಡಯಟ್ ಪ್ರಾಚಾರ್ಯ ಎನ್.ಜಿ.ನಾಯ್ಕ, ಹೈಸ್ಕೂಲ ಮುಖ್ಯಾಧ್ಯಾಪಕ ವಿ.ಪಿ.ಶಾನಭಾಗ, ಸಮನ್ವಯಾಧಿಕಾರಿ ರೇಖಾ ಪ್ರಾ.ಶಾ.ಶಿ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ಗ್ರಾ.ಪಂ ಅಧ್ಯಕ್ಷೆ ಜೋಸ್ಟಿನ್ ಡಿಸೋಜಾ, ಸಿ.ಆರ್.ಪಿ. ಭಾರತಿ ಆಚಾರ್ಯ, ಹಿ.ಪ್ರಾ.ಶಾಲಾ ಮುಖ್ಯಾಧ್ಯಾಪಕರ ಅರ್ಜುನ ಎಪ್.ಮೊಕಾಶಿ, ಶಾಲಾ ಅಧ್ಯಕ್ಷ ಸಂತೋಷ ನಾಯ್ಕ ಶಿಕ್ಷಕ ಪಂಡಿತರ ಆಗಾಧ ಪಾಂಡಿತ್ಯವನ್ನು ಬಣ್ಣಿಸಿ ನಿವೃತ್ತಿ ನಂತರವೂ ಅವರ ಸೇವೆ ನಿರಂತರವಾಗಿರಲೆAದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಮಾತನಾಡಿ, ಶಿಕ್ಷಕ ಪಂಡಿತರ ಅಮೋಘ ಸೇವೆಗೆ ರಾಷ್ಟç ಪ್ರಶಸ್ತಿ ದೊರಕಬೇಕೆಂದು ನಮ್ಮೆಲ್ಲರ ಆಶಯವಾಗಿತ್ತು ಕೇವಲ ಎರಡು ಅಂಕಗಳಲ್ಲಿ ಕೈ ತಪ್ಪಿದ್ದು ಎಲ್ಲರಿಗೂ ಬೇಸರವಾದರೂ ಇಂದು ನೆರೆದ 500 ಜನರು ಅವರಿಗೆ ತೋರಿದ ಗೌರವ ಪ್ರಶಸ್ತಿಗಿಂತಲೂ ಮಿಗಿಲಾಗಿದ್ದು ಅವರಿಗೆ ವಿಶೇಷ ಗೌರವ ನೀಡಲು ತಮ್ಮ ಇಲಾಖೆಯ ಜೀಪಿನಲ್ಲಿ ತಾವು ಕುಳಿತುಕೊಳ್ಳುವ ಸ್ಥಳದಲ್ಲಿ ಪಂಡಿತರ್‌ನ್ನು ಕುಳ್ಳಿರಿಸಿ ಅವರ ಮನೆ ಬಾಗಿಲಿಗೆ ಹೋಗಿ ಬೀಳ್ಕೊಟ್ಟರು. ಕಾರ್ಯಕ್ರಮವನ್ನು ಶಿಕ್ಷಕ ಸುರೇಶ ಪಟಗಾರ ನಿರೂಪಿಸಿದರು.

Share This
300x250 AD
300x250 AD
300x250 AD
Back to top