Slide
Slide
Slide
previous arrow
next arrow

ಅಡಿಕೆ ಕಳ್ಳತನ ಮಾಡಿದ ಕಳ್ಳರ ಬಂಧನ; ಅಡಿಕೆ, ಸ್ಕಾರ್ಪಿಯೋ ವಶ

300x250 AD

ಯಲ್ಲಾಪುರ: ಅ.1ರಂದು ರಾತ್ರಿ ಸಮಯದಲ್ಲಿ ತಾಲೂಕಿನ ಜೋಗದಮನೆ ಗ್ರಾಮದಲ್ಲಿ 50 ಕೆಜಿ ತೂಕದ ಮೂರು ಅಡಿಕೆ ಚೀಲಗಳನ್ನು ಕಳ್ಳತನ ಮಾಡಿರುವುದಕ್ಕೆ ಸಂಬ0ಧಿಸಿದ0ತೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಅಡಿಕೆ ಹಾಗೂ ಅಡಿಕೆ ಸಾಗಾಣಿಕೆಗೆ ಬಳಸಿದ ಸ್ಕಾರ್ಪಿಯೋ ವಾಹನವನ್ನು ಯಲ್ಲಾಪುರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಅ0ಕೋಲಾ ತಾಲೂಕಿನ ಮಳಲಗಾಂವ್ ನಿವಾಸಿಗಳಾದ ದೇವೇಂದ್ರ ಯಾನೆ ಕುಟ್ಟು ನಾಗೇಶ ಸಿದ್ಧಿ(25), ರವಿಚಂದ್ರ ಅನಂತ ಸಿದ್ದಿ(20), ಕೃಷ್ಣ ಯಾನೆ ಪಾಪು ನಾಗಪ್ಪ ಸಿದ್ಧಿ(20), ಕಾರ್ತಿಕ ನಾಗಪ್ಪ ಸಿದ್ದಿ(19) ಎಂಬುವವರನ್ನು ಪ್ರಕರಣಕ್ಕೆ ಸಂಬ0ಧಿಸಿದ0ತೆ ಬಂಧಿಸಲಾಗಿದೆ. ಆರೋಪಿತರಿಂದ ಕಳ್ಳತನ ಮಾಡಿದ 1 ಕ್ವಿಂಟಲ್ 50 ಕೆ.ಜಿ ಅಡಿಕೆ ಅಂದಾಜು ಮೌಲ್ಯ 55 ಸಾವಿರ ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಿದ ಮಹೇಂದ್ರ ಸ್ಥಾರ್ಪಿಯೋ ವಾಹನ, ಅಂದಾಜು ಮೌಲ್ಯ 2 ಲಕ್ಷ ರೂಪಾಯಿ ಸ್ವತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

300x250 AD

ಪ್ರಕರಣಕ್ಕೆ ಸಂಬ0ಧಿಸಿದ0ತೆ ಜೋಗದಮನೆಯ ಕೃಷಿ ಮತ್ತು ಅಡಿಕೆ ವ್ಯಾಪಾರಿ ಗೋಪಾಲಕೃಷ್ಣ ದತ್ತಾತ್ರೇಯ ಹೆಬ್ಬಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಸಿ.ಟಿ.ಜಯಕುಮಾರ, ಶಿರಸಿ ಪೊಲೀಸ ಉಪಾಧೀಕ್ಷಕರು ಗಣೇಶ ಕೆ.ಎಲ್ ಯಲ್ಲಾಪುರ ಪಿಐ ರಂಗನಾಥ ನೀಲಮ್ಮನವರ ನೇತ್ರತ್ವದಲ್ಲಿ ಪಿ.ಎಸ್.ಐ ರವಿ ಗುಡ್ಡಿ, ಪಿ.ಎಸ್.ಐ ನಿರಂಜನ ಹೆಗಡೆ, ಶಿರಶಿ ಮಾರುಕಟ್ಟೆ ಠಾಣಿ ಮಹಿಳಾ ಪಿ.ಎಸ್.ಐ ರತ್ನಾ ಕುರಿ, ಎ.ಎಸ್.ಐ ಗಣಪತಿ ಬೆನಕಟ್ಟಿ, ಹಾಗೂ ಸಿಬ್ಬಂದಿಯವರಾದ, ಮಹ್ಮದ ಶಫೀ, ಬಸವರಾಜ ಹಗರಿ, ಮಹಾಂತೇಶ ಬಾರ್ಕರ್, ಸಂತೋಷ ಆರ್‍ .ಕೆ, ಗಿರೀಶ ಲಮಾಣಿ, ಶೋಭಾ ನಾಯ್ಕ ಇವರು ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕರಣವನ್ನು ಪತ್ತೆ ಮಾಡಿದ ಅಧಿಕಾರಿಗಳು ಸಿಬ್ಬಂದಿಗಳಿಗೆ ಪೋಲಿಸ್ ಅಧೀಕ್ಷಕರು ಶ್ಲಾಘಿಸಿ, ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top