Slide
Slide
Slide
previous arrow
next arrow

ಅನೈತಿಕ ಸಂಬಂಧಕ್ಕೆ ಅಡ್ಡಿ : ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ

300x250 AD

ಶಿರಸಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಗಂಡನನ್ನೇ ಪತ್ನಿಯು ಪ್ರಿಯಕರನೊಂದಿಗೆ ಸೇರಿ ಹತ್ಯೆಗೈದು ಇದೀಗ ಕುಮಟಾ ಪೋಲಿಸರ ಬಲೆಗೆ ಬಿದ್ದಿದ್ದಾರೆ.

ಬಾಗಲಕೋಟೆ ಮೂಲದ ಬಶೀರ ಸಾಬ್ ವಾರದ ಹಿಂದೆಯಷ್ಟೇ ದೇವಿಮನೆ ಘಟ್ಟದ ದೇವಸ್ಥಾನದ ಹಿಂದಿನ ಕಾಡಿನಲ್ಲಿ ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ಹೆಂಡತಿ ರಜಮಾ ಹಾಗೂ ಇವಳ ಪ್ರಿಯಕರ ಪರಶುರಾಮ ಮತ್ತು ಆತನ ದೊಡ್ಡಮ್ಮನ ಮಕ್ಕಳಾದ ರವಿ, ಬಸವರಾಜ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. 

ಈ ಬಗ್ಗೆ ತನಿಖೆ ನಡೆಸಿದ ಕುಮಟಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಕೊಲೆ ಪಾತಕಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಜಮಾ ತನ್ನ ಗಂಡನನ್ನು ಕೊಲೆ ಮಾಡುವಂತೆ ಪ್ರಿಯಕರನಿಗೆ 10 ಸಾವಿರ ನೀಡಿದ್ದಳು. ಪರಶುರಾಮ ತನ್ನ ದೊಡ್ಡಮ್ಮನ ಮಕ್ಕಳೊಂದಿಗೆ ಬಶೀರನನ್ನು ದೇವಿಮನೆ ಘಟ್ಟದ ದೇವಸ್ಥಾನದ ಹಿಂದಿನ ಕಾಡಿಗೆ ಕರೆದೊಯ್ದು ಸಾರಾಯಿ ಕುಡಿಸಿ, ಕೊಲೆಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

300x250 AD

ಕಾರ್ಯಾಚರಣೆಯಲ್ಲಿ ಪೋಲಿಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಪಿಎಸ್‌ಐಗಳಾದ ನವೀನ ನಾಯ್ಕ, ಈ.ಸಿ.ಸಂಪತ್ ಸೇರಿದಂತೆ ಸಿಬ್ಬಂದಿಗಳಿದ್ದರು.

Share This
300x250 AD
300x250 AD
300x250 AD
Back to top