Slide
Slide
Slide
previous arrow
next arrow

ನಾಳೆ ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ

300x250 AD

ಕುಮಟಾ: ಕುಮಟಾ ವಿಭಾಗದ ವ್ಯಾಪ್ತಿಯಲ್ಲಿ 3 3ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಾಗೂ ಜಂಗಲ್ ಕಟಿಂಗ್ ಇರುವುದರಿಂದ ಗೋಕರ್ಣ, ಮಾದನಗೇರಿ, ಬಂಕಿಕೊಡ್ಲ, ತದಡಿ, ಬಿಜ್ಜೂರು, ಓಂ ಬೀಚ್ ಗಂಗಾವಳಿ ಫೀಡರಿನ ಎಲ್ಲ ಭಾಗಗಳಲ್ಲಿ ಮತ್ತು ಮರಾಕಲ್ ಶಾಖೆಯ 11 ಕೆವಿ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಾಗೂ ಜಂಗಲ್ ಕಟಿಂಗ್ ಇರುವುದರಿಂದ ಕಲ್ಲಬ್ಬೆ, ಮೂರೂರು, ಹೊದ್ಕೆ-ಶಿರೂರು ಉಳ್ಳೂರುಮಠ, ಸಂತೆಗುಳಿ ಫೀಡರಿನ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನಗರ ಶಾಖೆಯ ಇಂಡಸ್ಟ್ರಿಯಲ್ 11 ಕೆವಿ ಮಾರ್ಗದಲ್ಲಿ ಐಆರ್‌ಬಿ ಕಾಮಗಾರಿ ಇರುವುದರಿಂದ ನಾಳೆ ಬೆಳಿಗ್ಗೆ 9-30 ರಿಂದ 4-30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಅ.6 ರಂದು ಐಆರ್‌ಬಿಯವರ ಕಾಮಗಾರಿ ಇರುವ ಕಾರಣ ನಗರ ಶಾಖೆಯ ಚಿತ್ರಗಿ ಫೀಡರಿನ 11 ಕೆವಿ ಮಾರ್ಗದ ಅಳ್ವೇಕೋಡಿ ಭಾಗದಲ್ಲಿ ಬೆಳಿಗ್ಗೆ 9-30 ರಿಂದ ಸಾಯಂಕಾಲ5-30 ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top