ಹೊನ್ನಾವರ: ನಮ್ಮ ಮಣ್ಣು ನಮ್ಮ ದೇಶ ಕಾರ್ಯಕ್ರಮದಡಿ ಪ.ಪಂ. ವತಿಯಿಂದ ಅಮೃತ ಕಳಶ ಸ್ಥಾಪಿಸಿ, ಹಿರಿಯ ನಾಗರಿಕರು, ಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಗಳಿAದ ಮಣ್ಣನ್ನು ಸಂಗ್ರಹಿಸಲಾಯಿತು.
ಸ್ವಚ್ಛತಾ ರಾಯಭಾರಿ ಡಾ.ಜಿ.ಪಿ.ಪಾಠಣಕರ ಮಾತನಾಡಿ, ಕೇಂದ್ರ ಸರ್ಕಾರವು ನನ್ನ ಮಣ್ಣು ನನ್ನ ದೇಶ ಎಂಬ ಉತ್ತಮ ಪರಿಕಲ್ಪನೆಯೊಂದಿಗೆ ದೇಶದ ಮಣ್ಣನ್ನು ಸಂಗ್ರಹಿಸಿ ವೀರ ಯೋಧರಿಗೆ ನಮನ ಸಲ್ಲಿಸಲು ಸ್ಮಾರಕ ನಿರ್ಮಿಸಲು ಬಳಸಲಾಗುತ್ತದೆ ಎಂದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರವೀಣಕುಮಾರ ಮಾತನಾಡಿ, ಆ.15ರಿಂದ ಅಮೃತಕಳಶದಲ್ಲಿ ಮಣ್ಣನ್ನು ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಹಂತವಾಗಿ ಕಾರ್ಯಾಲಯದಲ್ಲಿ ಹಿರಿಯ ನಾಗರೀಕರಿಂದ, ಸಾರ್ವಜನಿಕ ರಿಂದ ಮಣ್ಣನ್ನು ಸಂಗ್ರಹಿಸಿದ್ದೇವೆ. ಈ ರೀತಿ ಸಂಗ್ರಹಿಸಿದ ಮಣ್ಣನ್ನು ತಾಲೂಕಾ ಮಟ್ಟದಲ್ಲಿ ನೀಡಿ ಅಲ್ಲಿಂದ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಕೊನೆಯದಾಗಿ ರಾಜ್ಯಮಟ್ಟದಿಂದ ರಾಷ್ಟç ರಾಜಧಾನಿ ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಲುಪಿಸಲಾಗುತ್ತದೆ. ಹೊನ್ನಾವರದ ಮಣ್ಣನ್ನು ತಲುಪಿಸಲು ಸ್ಥಳೀಯ ಕಾಲೇಜಿನ 5 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅಮೃತ ಕಳಶ ಯಾತ್ರೆಯ ರೈಲಿನ ಮೂಲಕ ನವದೆಹಲಿಗೆ ಕಳುಹಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಇದ್ದರು.