Slide
Slide
Slide
previous arrow
next arrow

ಅಕ್ರಮ ಸಾರಾಯಿ ಮಾರಾಟ; ಪೊಲೀಸರ ದಾಳಿ

300x250 AD

ಹೊನ್ನಾವರ: ತಾಲೂಕಿನ ಹಿರೇಮಠ ಮೀನು ಮಾರುಕಟ್ಟೆ ಹತ್ತಿರ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು, ಸಾರಾಯಿ ವಶಕ್ಕೆ ಪಡೆಯಲಾಗಿದೆ.

ದಾಳಿಯ ವೇಳೆ ಕಾಸರಗೋಡ ಹಿರೇಮಠದ ಆಗ್ನೆಲ್ ಫರ್ನಾಂಡಿಸ್ ಪರಾರಿಯಾಗಿದ್ದು,ಆರೋಪಿ ಪತ್ತೆ ಕಾರ್ಯ ಮುಂದುವರೆದಿದೆ. ಅಕ್ರಮವಾಗಿ ಮಾರಾಟ ಮಾಡಲು ಶೇಖರಿಸಿಕೊಂಡಿದ್ದ ಸುಮಾರು 2790 ರುಪಾಯಿ ಮೌಲ್ಯದ ಅಕ್ರಮ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.

300x250 AD

ಇನ್‌ಸ್ಪೆಕ್ಟರ್ ಮುರುಗೇಶ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿಠ್ಠಲ ವಡವಾಣಿ ಸಿಬ್ಬಂದಿ ಮಹಿಳಾ ಎಚ್‌ಸಿ ಲಕ್ಷ್ಮಿ ಗುನಗಾ, ಅನಿತಾ ಮಡಿವಾಳ, ಜೀಪ್ ಚಾಲಕ ಕೃಷ್ಣಾ ನಾಯ್ಕ, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಶರತ್ ನಾಯ್ಕ, ಗೌರೀಶ ಗಾಡಿಗಾ, ನಾರಾಯಣ ಗೌಡ ಕಾರ್ಯಾಚರಣೆಯಲ್ಲಿ ಇದ್ದರು. ಈ ಕುರಿತು ಕರಾವಳಿ ಪೊಲೀಸ್ ಠಾಣೆಯಲ್ಲಿ ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ 1965 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.

Share This
300x250 AD
300x250 AD
300x250 AD
Back to top