ಶಿರಸಿ: ಬರಗಾಲದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಮತ್ತೊಂದು ಆಘಾತ ಎದುರಾಗುತ್ತಿದ್ದು, ಜಾನುವಾರುಗಳಿಗೆ ವಿಚಿತ್ರ ಕಾಯಿಲೆಯೊಂದು ಜಾನುವಾರುಗಳಿಗೆ ಅಂಟಿರುವ ಪರಿಣಾಮ ನಿಗೂಢವಾಗಿ ಸಾವನ್ನಪ್ಪುತ್ತಿದೆ.
ತಾಲೂಕಿನ ಪೂರ್ವಭಾಗದ ಕೆಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ. ಕೊಟ್ಟಿಗೆಯಲ್ಲಿ ಕಟ್ಟಿದ ಸಣ್ಣ ಕರುಗಳಿಗೆ ರೋಗ ತಗುಲಿದ್ದು, ಬಾಯಲ್ಲಿ ಬುರುಬು (ನೊರೆ) ಮೂಗಲ್ಲಿ ರಕ್ತಸ್ರಾವ ಮತ್ತು ಬಲಗಡೆ ಕಪಾಳ ಭಾಗದದಲ್ಲಿ ಬಾವು ಬರುವುದು ಮತ್ತು ಸಾಯುವ ಮುನ್ಸೂಚನೆಯಿಂದ ಕುತ್ತಿಗೆಯನ್ನು ಅಡ್ಡ ಹಾಕಿ ಇಟ್ಟುಕೊಳ್ಳುತ್ತಿವೆ. ಮೇವುಂಡು ಅರಾಮಾಗಿ ಓಡಾಡಿಕೊಂಡಿದ್ದ ಸಣ್ಣ ಕರುಗಳು ಸಾವನ್ನಪ್ಪುತ್ತಿವೆ. ರೋಗಕ್ಕೆ ತುತ್ತಾದ ಕರುಗಳಿಗೆ ಮೊದಲು ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಆಮೇಲೆ ನಿಂತುಕೊಳ್ಳಲು ಶಕ್ತಿಯಿಲ್ಲದೇ ವಿಪರೀತ ಜ್ವರಕ್ಕೆ ನಿತ್ರಾಣಗೊಳ್ಳುತ್ತಿವೆ. ಆಮೇಲೆ ರೋಗ ಉಲ್ಬಣಗೊಂಡು ಸಾಯುತ್ತಿರುವುದರಿಂದ ರೈತರು ಚಿಂತಾಕ್ರಾAತರಾಗಿದ್ದಾರೆ.
ಮೇವು ಮತ್ತು ಪಶು ಆಹಾರಗಳ ದರದಲ್ಲಿ ದಿನಿತ್ಯ ಏರಿಕೆ ಕಾಣುತ್ತಿರುವುದರಿಂದ ಸಾಕಷ್ಟು ರೈತರು ಪಶು ಸಂಗೋಪನೆಯಿAದ ವಿಮುಖರಾಗುತ್ತಿದ್ದಾರೆ. ಈ ವಷÀðದ ಬರಗಾಲದ ಪರಿಸ್ಥಿತಿಯಲ್ಲಿ ರೈತನ ಬಾಳು ದುಸ್ತರವಾಗಿದೆ. ಇದರ ಮಧ್ಯೆ ಕೆಲ ರೈತರು ತಮ್ಮ ಕೃಷಿಯ ಜತೆ ಹೈನೋಧ್ಯಮವನ್ನು ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದನ-ಕರುಗಳಲ್ಲಿ ರೋಗವು ಹೆಚ್ಚಾಗುತ್ತಿದೆ. ನಿಗೂಢ ಕಾಯಿಲೆಯಿಂದ 24 ಗಂಟೆಯಲ್ಲಿ ಎರಡು ಕರು ಒಂದೇ ರೀತಿಯ ಲಕ್ಷಣದಲ್ಲಿ ಸಾವನ್ನಪ್ಪದೆ. ಕುಡಿಯಲು ನೀರಿಗೂ ಕಷ್ಟಪಡುವಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಜಾನುವಾರುಗಳನ್ನು ಸಾಕಿದರೂ ಕಣ್ಣೆದರುರು ಸಾವನ್ನಪ್ಪುತ್ತಿರುವುದು ಬಹಳ ದುಖಃದ ಸಂಗತಿ. ರೈತರ ಸಂಕಷ್ಟವನ್ನು ನಿವಾರಣೆ ಮಾಡಲು ತಕ್ಷಣ ಸರ್ಕಾರ ನೆರವಿಗೆ ಧಾವಿಸಬೇಕು. ಅದೇ ರೀತಿ ರೈತರಿಗೆ ಸೂಕ್ತ ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ಇಲಾಖೆ ಮುತುವರ್ಜಿವಹಿಸಬೇಕು ಎನ್ನುತ್ತಾರೆ ನೋಂದ ರೈತ ಬದನಗೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗಾಪುರ ಗ್ರಾಮದ ಕೆರಿಯಪ್ಪ ಜೋಗಪ್ಪ ಕ್ಯಾತನಣ್ಣನವರ್.