ಹಳಿಯಾಳ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆ ಹಾಗೂ ಟಾಟಾ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಧಾರವಾಡ ಸಹಯೋಗದಲ್ಲಿ ಅಜಮನಾಳ ತಾಂಡಾ ಗ್ರಾಮದಲ್ಲಿ ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಿಬಿಡಿ ಆರ್‌ಸೆಟಿ ಸಂಸ್ಥೆ ನಿರ್ದೇಶಕ ಪ್ರಶಾಂತ್ ಬಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಿದರು. ಮುಖ್ಯ ಅಥಿತಿಗಳಾಗಿ ಯೋಜನಾಧಿಕಾರಿ ಸಂತೋಷ ಪರೀಟ್ ಸಿಬಿಡಿಆರ್‌ಸೆಟಿ, ಭೀಮಾ ಲಮಾಣಿ, ಪೀರಪ್ಪ ಲಮಾಣಿ, ಕೃಷ್ಣ ಗಂಗಪ್ಪ ಲಮಾಣಿ ಊರಿನ ಹಿರಿಯರು ಉಪಸ್ಥಿತರಿದ್ದರು.
ಅತಿಥಿಗಳಾಗಿ ಅನಿಲ ಪೀರಪ್ಪ ಲಮಾಣಿ ಸಮಾಜ ಸೇವಕರು, ರಾಧಾ ಸುರೇಶ ಖಂಡೇಕರ್ ತರಬೇತಿಯ ಸಂಪನ್ಮೂಲ ವ್ಯಕ್ತಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉಳವಯ್ಯ ಬೆಂಡಿಗೇರಿ ಸಂಘಟಿಸಿದರು. ವಿಶೇಷವಾಗಿ ಹೊಲಿಗೆ ತರಬೇತಿಯ ಶಿಬಿರಾರ್ಥಿಗಳು ಬಂಜಾರಾ ಸಮಾಜದ ನೃತ್ಯ ಮಾಡಿದರು. ಈ ಕಾರ್ಯಕ್ರಮವನ್ನು ಲಕ್ಷ್ಮೀ ಲಮಾಣಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ನಿಶಾ ನಿಂಗಪ್ಪ ಲಮಾಣಿ ಸ್ವಾಗತಿಸಿದರು. ಮಂಜುಳಾ ಎಸ್.ಲಮಾಣಿ ಹಾಗೂ ಅನ್ನಪೂರ್ಣ ಲಮಾಣಿ ಅನುಭವ ಹಂಚಿಕೊAಡರು.