ಅಂಕೋಲಾ: ತಾಲೂಕಿನ ಹಿಲ್ಲೂರ ಮೀನುಗಾರರ ಸಹಕಾರಿ ಸಂಘ 18ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಇತ್ತೀಚೆಗೆ ಸಂಘದ ಆಡಳಿತ ಕಚೇರಿಯಲ್ಲಿ ನಡೆಸಲಾಯಿತು.
ಸಂಘದ ಸಂಸ್ಥಾಪಕ ಅಧ್ಯಕ್ಷ ಹರಿಹರ ಹರಿಕಾಂತ ಹಿಲ್ಲೂರ ಅಧ್ಯಕ್ಷತೆ ವಹಿಸಿ ಮಾತಾಡಿ, ಸಂಘವು ಹದಿನಾಲ್ಕು ವರ್ಷ ಪೂರೈಸಿದ್ದು, ಅಂದಿನಿ0ದ ಇಂದಿನವರೆಗೆ ಲಾಭಂಶದಲ್ಲಿಯೇ ಮುಂದುವರೆದಿದೆ. ಇದಕ್ಕೆ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಸದಸ್ಯರ ಸಹಕಾರವೇ ಕಾರಣ ಮತ್ತು ಅಂದು ಕುಗ್ರಾಮವಾದ ಹಿಲ್ಲೂರಿನಲ್ಲಿ ಮೀನುಗಾರರ ಸಹಕಾರಿ ಸಂಘವನ್ನು ಸ್ಥಾಪಿಸುವುದರ ಮೂಲಕ ಮೀನುಗಾರರಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸರ್ಕಾರದ ವಿವಿಧ ಯೋಜನೆಗಳು ಮುಖ್ಯವಾಗಿ ಮತ್ಸ ಸಂಪದ, ಉಳಿತಾಯ ಮತ್ತು ಪರಿಹಾರ ಯೋಜನೆ, ಮಹಿಳೆಯರಿಗೆ ಸಾಲ ಸೌಲಭ್ಯ, ಜೀವ ವಿಮೆ, ಮೀನುಗಾರಿಕೆ ನಡೆಸುವಾಗ ಅವಗಢ ಸಂಭವಿಸಿದಾಗ ಪರಿಹಾರ ವಿವಿಧ ಯೋಜನೆಗಳು ಸಂಘದಿAದ ದೊರಕಿಸಿ ಕೊಡುವಲ್ಲಿ ಸಂಘವು ಮುಂಚೂಣಿಯಲ್ಲಿದೆ ಎಂದು ಅವರು ನುಡಿದರು.
ಈ ಸಂದ0ರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಚಂದ್ರಕಾ0ತ ಹರಿಕಾಂತ, ಸೀತಾರಾಮ ಹರಿಕಾಂತ, ಜಗದೀಶ ಹರಿಕಾಂತ, ಉದಯ ಹರಿಕಾಂತ, ವೀಣಾ ಹರಿಕಾಂತ, ನಾಗವೇಣಿ ಹರಿಕಾಂತ, ಶ್ರೀಕಾಂತ ಹರಿಕಾಂತ ಹಾಗೂ ಇನ್ನಿತರ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ವೆಂಕಟಿ ಮತ್ತು ಜಗದೀಶ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.