Slide
Slide
Slide
previous arrow
next arrow

ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ ಯಶಸ್ವಿ

300x250 AD

ಸಿದ್ದಾಪುರ: ತಾಲೂಕಿನ ಕೋಡ್ಸರ(ಮುಠ್ಠಳ್ಳಿ)ಯ ಸಿದ್ಧಿವಿನಾಯಕ ರೈತಯುವಕ ಸಂಘ ಹಾಗೂ ಊರವರ ಸಹಕಾರದಲ್ಲಿ ಅನಂತ ಚತುರ್ದಶೀ ಪ್ರಯುಕ್ತ ಕೋಡ್ಸರ ಮುಠ್ಠಳ್ಳಿ ಶಾಲಾ ಆವಾರದಲ್ಲಿ ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು,ಆದರ್ಶ ಎಂ.ಆರ್, ಶಂಕರ ಭಾಗವತ ಯಲ್ಲಾಪುರ, ಗಜಾನನ ಕತಗಾಲ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೆಕೈ(ಶಲ್ಯ), ವಾಸುದೇವ ರಂಗಾ ಭಟ್ಟ ಮಧೂರು(ಕೌರವ), ಗೊರಮನೆ ಮಂಜುನಾಥ (ಕರ್ಣ) ಪಾತ್ರವನನು ನಿರ್ವಹಿಸಿದರು.

300x250 AD

ಸೀತಾರಾಮ ಹೆಗಡೆ ಹೊಂಡಗಾಶಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೆಕೈ ಅವರನ್ನು ಊರವರ ಪರವಾಗಿ ಬಿ.ಡಿ.ಹೆಗಡೆ ಹೊಲಗದ್ದೆ ಸನ್ಮಾನಿಸಿ ಗೌರವಿಸಿದರು.ರಾಮಕೃಷ್ಣ ಹೆಗಡೆ ಬಕ್ಕೇಮನೆ ಸ್ವಾಗತಿಸಿದರು. ನಾರಾಯಣ ಹೆಗಡೆ ನೇರ್ಲಮನೆ ವಂದಿಸಿದರು.

Share This
300x250 AD
300x250 AD
300x250 AD
Back to top