ಯಲ್ಲಾಪುರ: ಕರ್ನಾಟಕ ರಾಜ್ಯದ ರೈತರುಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ನೀಡಿರುವ ಆದೇಶ ನೀಡಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಖಾಲಿ ಕೊಡ, ಭಿತ್ತಿಪತ್ರ ಪ್ರದರ್ಶನ ಹಾಗೂ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿ, ನಂತರ ತಹಶೀಲ್ದಾರ ಮೂಲಕ ರಾಜ್ಯಪಾಲರು ಹಾಗೂ ಸಂಸದ ಅನಂತಕುಮಾರ ಹೆಗಡೆಯವರಿಗೆ ಮನವಿ ರವಾನಿಸಿದರು.
ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟವು ರಾಜ್ಯ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಹಾಗೂ ಕಾವೇರಿ ನೀರು ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಕರ್ನಾಟಕದ ರೈತರ ಪರ ಹಿತ ಕಾಯುವುದಕ್ಕಾಗಿ ಶುಕ್ರವಾರ ಸಂಘಟನೆಯ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ನೀಡಿದರು.
ಜಯ ಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್, ನಗರ ಘಟಕ ಅಧ್ಯಕ್ಷ ಕೆ.ಎಫ್.ಕಂಬಳೆನ್ನವರ, ಉಪಾಧ್ಯಕ್ಷ ಸಮೀರ ಖುರೇಶಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಹನಮರೆಡ್ಡಿ, ತಾಲೂಕಾ ಎಸ್.ಸಿ.ಎಸ್.ಟಿ ಘಟಕದ ಅಧ್ಯಕ್ಷ ಚೆನ್ನಪ್ಪ, ಟಿ.ಎಚ್, ಗುಳ್ಳಾಪುರ ಘಟಕದ ಅಧ್ಯಕ್ಷ ಮಹೇಶ ನಾಯ್ಕ, ಕಿರವತ್ತಿ ಮಹಿಳಾ ಘಟಕದ ಅಧ್ಯಕ್ಷೆ ಪಾತಿಮಾ ದರವೇಶಿ, ತಾಲೂಕಾ ಮಹಿಳಾ ಕಾರ್ಯಾಧ್ಯಕ್ಷರು ಶಾಹಿನ ಮುಜಾವರ, ತಾಲೂಕಾ ಮಹಿಳಾ ಘಟಕದ ಸಂಚಾಲಕಿ ಶಮಶಾದ ಆತ್ತಾರ , ಘಟಕ ಅಧ್ಯಕ್ಷ ಸಂತೋಷ ಗಾವಡೆ ಕೂಳಿಕೇರಿ ಹಾಗೂ ಜಯ ಕರ್ನಾಟಕ ಸಂಘಟನೆ ವಿವಿಧ ಪದಾಧಿಕಾರಿಗಳೂ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.