Slide
Slide
Slide
previous arrow
next arrow

ಜೊಯಿಡಾ ಸಹಕಾರಿ ಸಂಘದಲ್ಲಿ ಅವ್ಯವಹಾರ ಆರೋಪ; ತನಿಖೆಗೆ ಆಗ್ರಹ

300x250 AD

ಜೊಯಿಡಾ: ಇಲ್ಲಿನ ಜೊಯಿಡಾ ಸೇವಾ ಸಹಕಾರಿ ಸಂಘದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರದಲ್ಲಿ ಹಲವಾರು ವ್ಯಕ್ತಿಗಳು ಮತ್ತು ಜಿಲ್ಲೆಯ ಸೇವಾ ಸಹಕಾರಿ ಸಂಘಗಳು ಹಾಗೂ ಹೊರ ರಾಜ್ಯದ ವ್ಯಕ್ತಿಗಳು ಶಾಮೀಲಾಗಿರುವ ಶಂಕೆ ಇದೆ. ತಕ್ಷಣ ಸಿಓಡಿ ಮೂಲಕ ತನಿಖೆ ನಡೆಸಿ, ಬಡ ಜನರ ಹಣ ತಪ್ಪಿತಸ್ಥರಿಂದ ವಸೂಲಿ ಮಾಡಿ, ಅದನ್ನು ಶೀಘ್ರ ಜನರಿಗೆ ಮರಳಿಸಬೇಕೆಂದು ಆಗ್ರಹಿಸಿ ಕಾಳಿ ಬ್ರಿಗೇಡ್ ವತಿಯಿಂದ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಗಿದೆ.

ಈ ವೇಳೆ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ ದೇಸಾಯಿ ಮಾತನಾಡಿ, ಜೊಯಿಡಾ ಸೇವಾ ಸಹಕಾರಿ ಸಂಘ 50 ವರ್ಷದಷ್ಟು ಹಳೆಯ ಸಂಘವಾಗಿದೆ. ಸುಮಾರು 2000 ಸದಸ್ಯರನ್ನು ಹೊಂದಿರುವ ತಾಲೂಕಿನ ದೊಡ್ಡ ಸಂಘ. ಇದರಲ್ಲಿ ಇಲ್ಲಿನ ಬಡಜನರು ತಮ್ಮ ಜೀವಮಾನದ ಉಳಿತಾಯದ ಹಣ ಇಟ್ಟಿದ್ದರು. ಈ ಹಣ ಅವರಿಗೆ ಶೀಘ್ರ ಸಿಗುವಂತಾಗಬೇಕು. ಈ ಅವ್ಯವಹಾರದಲ್ಲಿ ಪರ ರಾಜ್ಯದ ವ್ಯಕ್ತಿಗಳು ಶಾಮೀಲಾಗಿರುವ ಶಂಕೆಯಿದೆ. ಸೇವಾ ಸಹಕಾರಿ ಸಂಘದಿಂದ ಕೋಟಿಗಟ್ಟಲೆ ಹಣ ನವೀನ ಡಿ. ಗಾಂವಕರ ಎನ್ನುವವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ. ಆ ಖಾತೆ ಮುಟ್ಟುಗೋಲು ಹಾಕಿಕೊಂಡು ಜನರ ಹಣ ವಾಪಸು ತರುವ ಕೆಲಸ ಮೊದಲು ಮಾಡಬೇಕಿದೆ. ಅದಕ್ಕಾಗಿ ಇದರ ತನಿಖೆ ತಕ್ಷಣ ಸಿಓಡಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

300x250 AD

ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮುಖ್ಯ ಸಮಿತಿ ಅಧ್ಯಕ್ಷ ಉಮೇಶ್ ವೇಳಿಪ, ಮಾಜಿ ಅಧ್ಯಕ್ಷ ಕಿರಣ ನಾಯ್ಕ, ನಾರಾಯಣ ಹೆಬ್ಬಾರ, ಪ್ರಭಾಕರ ನಾಯ್ಕ, ಕಾರ್ಯದರ್ಶಿ ಸಮೀರ ಮುಜಾವರ,ಸಿಮಾಂವ ವೇಗಸ, ವಿಠ್ಠಲ ಸಾವರಕರ, ದಿನೇಶ ದೇಸಾಯಿ, ಬಸವಣ್ಣಯ್ಯ ಹಿರೇಮಠ, ಸೋಮೇಶ್ವರ ನಾಯ್ಕ, ಈಶ್ವರಿ ದೇಸಾಯಿ, ರಶ್ಮಿ ರೇಡಕರ, ಶ್ರೀಕಾಂತ ವಡ್ಡರ, ಮಹಾದೇವ ದೇಸಾಯಿ, ಚಂದ್ರಶೇಖರ ದೇಸಾಯಿ, ರಫಿಕ ಖಾಜಿ, ಮುಂತಾದ ನೂರಾರು ಜನರು  ಇದ್ದರು.

Share This
300x250 AD
300x250 AD
300x250 AD
Back to top