ಶಿರಸಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾನೆ ಎಂಬ ಆರೋಪದ ಮೇಲೆ ಶಿರಸಿ ನಗರದ ರಾಮನಬೈಲ್ ನಿವಾಸಿ ಉಮರ್ ಫಾರುಕ್ ಎಂಬಾತನ ಮೇಲೆ ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿತ ಉಮರ್ ಫಾರೂಕ್ ಈದ್ ಮಿಲಾದ್ ಹಬ್ಬದಂದು ತನ್ನ ಮನೆಯ ಮೇಲೆ ಕೇಸರಿ-ಬಿಳಿ-ಹಸಿರು ಇರುವ ತ್ರಿವರ್ಣ ಧ್ವಜದ ಮಧ್ಯೆ ಅಶೋಕ ಚಕ್ರ ಇರುವ ಜಾಗದಲ್ಲಿ ಮುಸ್ಲೀಂ ಮತದ ಮದಿನಾ ಗುಂಬಜಿನ ಚಿತ್ರ ಹಾಕಿ, ಮುಸ್ಲೀಂ ಮತದ ಘೋಷಣೆ ಬರೆದ ಚಿತ್ರವನ್ನು ಇದ್ದಿದ್ದನ್ನು ಎಲ್ಲರಿಗೂ ಕಾಣುವಂತೆ ಹಾರಿಸಿ,ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾನೆ.
ಈ ನಿಟ್ಟಿನಲ್ಲಿ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ. ನಗರ ಪೋಲೀಸ್ ಠಾಣೆ ಪಿಎಸ್ಐ ರಾಜಕುಮಾರ್ ಉಕ್ಕಲಿ ತನಿಖೆ ನಡೆಸುತ್ತಿದ್ದಾರೆ. ಹಾಗು ಈಗಾಗಲೇ ಆರೋಪಿತನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.