Slide
Slide
Slide
previous arrow
next arrow

ಸಂಸ್ಕೃತ ಕಲಿಯುವ ಆಸಕ್ತಿ ಹೊಂದಿದವರಿಗೆ ಇಲ್ಲಿದೆ ಸುವರ್ಣವಕಾಶ

300x250 AD

ಸಂಸ್ಕೃತ ಕಲಿಯುವ ಆಸಕ್ತಿ ಹೊಂದಿದವರಿಗೆ ಈಗ ಸುವರ್ಣವಕಾಶ

eUK ವರದಿ: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ( Central Sanskrit University ) ಮುಕ್ತಸ್ವಾಧ್ಯಾಯಪೀಠವು ದೂರಸ್ಥ ಶಿಕ್ಷಣ ಪ್ರಣಾಳಿಕೆಯ ಮೂಲಕ ಅನೇಕ ಸಂಸ್ಕೃತ ಪಠ್ಯಕ್ರಮಗಳನ್ನು ಪರಿಚಯಿಸುತ್ತಿದೆ. ಇವುಗಳು ಆನ್-ಲೈನ್ ಪಠ್ಯಕ್ರಮಗಳಾಗಿರುವುದರಿಂದ ನೂತನ ಶಿಕ್ಷಣ ನೀತಿಗನುಗುಣವಾಗಿ ಬೇರೊಂದು ಕಡೆ ಓದುತ್ತಿರುವವರೂ ಕೂಡ ಈ ಪಾಠ್ಯಕ್ರಮವನ್ನು ಓದುವ ಮೂಲಕ Dual degree ಸಂಪಾದಿಸಬಹುದಾಗಿದೆ.

ಇಲ್ಲಿ ಸಂಸ್ಕೃತವನ್ನು ಕಲಿಯಬಯಸವವರಿಗೆ ಸಂಸ್ಕೃತ ಭಾಷಾ ಶಿಕ್ಷಣಮ್ ಎನ್ನುವ ಆನ್-ಲೈನ್ ಪಠ್ಯಕ್ರಮವನ್ನೂ, 8 ರಿಂದ 14 ರ ವಯೋಮಾನದ ಮಕ್ಕಳಿಗೆ ನೈತಿಕ ಮೌಲ್ಯಗಳ ಶಿಕ್ಷಣದೊಂದಿಗೆ ಸಂಸ್ಕೃತ ಭಾಷಾ ಪಾಠವನ್ನೂ, ಹಾಗೂ 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜ್ಯೋತಿಷ್ಯ, ವ್ಯಾಕರಣ, ಸಾಹಿತ್ಯ ಇತ್ಯಾದಿ ಶಾಸ್ತ್ರಗಳನ್ನೂ ಪರಿಚಯಿಸುವ ಉದ್ದೇಶದೊಂದಿಗೆ ಅನೇಕ ಸ್ತರಗಳಲ್ಲಿ 150 ಕ್ಕೂ ಹೆಚ್ಚು ಪಾಠ್ಯಕ್ರಮಗಳನ್ನು ಸಂಸ್ಕೃತದ ಮೂಲಕವೇ ಅತ್ಯಂತ ಸರಳವಾಗಿ ಕಲಿಯುವ ಸದವಕಾಶವನ್ನು ಕಲ್ಪಿಸುತ್ತಿದೆ.

300x250 AD

ಐದು ಹಂತಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸುವ ಈ ಪ್ರಕ್ರಿಯೆಯಲ್ಲಿ 12 ವರ್ಷದ ಮೇಲಿನ ಎಲ್ಲರೂ ಭಾಗವಹಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-09-2023. ಪಾಠ್ಯ, ಶುಲ್ಕ, ಮೊದಲಾದ ಹೆಚ್ಚಿನ ಮಾಹಿತಿಗಾಗಿ Central Sanskrit University ಯ ಅಂತರ್ಜಾಲವನ್ನೂ( https://www.sanskrit.nic.in/msp/ ) ಅಥವಾ ದೂರವಾಣಿ ಸಂಖ್ಯೆ ಡಾ. ಪ್ರಸಾದ ಭಟ್ಟ Tel:+919964586336 ಇವರನ್ನೂ ಅಥವಾ ಶೃಂಗೇರಿಯಲ್ಲಿರುವ ರಾಜೀವಗಾಂಧಿ ಪರಿಸರವನ್ನೂ ಸಂಪರ್ಕಿಸಬಹುದಾಗಿದೆ.

Share This
300x250 AD
300x250 AD
300x250 AD
Back to top