Slide
Slide
Slide
previous arrow
next arrow

ದಿ.ಫಾಯ್ದೆ ಬರಹಗಾರರಿಗೆ ಪ್ರೇರಣೆ: ಆರ್.ಎನ್.ಹೆಗಡೆ

300x250 AD

ಯಲ್ಲಾಪುರ: ನಿರಂತರ ಬದಲಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾವಂತರೆನಿಸಿದ ಮಾತ್ರಕ್ಕೆ ಎಲ್ಲರೂ ಬರಹಗಾರರಾಗಲು ಸಾಧ್ಯವಿಲ್ಲ. ಎಂದು ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು.

ಅವರು ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲಾ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ ಹಾಗೂ ಮಂಚಿಕೇರಿಯ ರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ದಿ.ಪದ್ಮಾಕರ ಫಾಯ್ದೆಯವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ `ನೆನಪಿನಂಗಳದಲ್ಲಿ ಫಾಯ್ದೆ ಮಾಸ್ತರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮೆಲ್ಲರಿಗೂ ಗುರುಗಳಾಗಿದ್ದ ಫಾಯ್ದೆಯವರು ಶಿಕ್ಷಣದೊಂದಿಗೆ ಶಿಸ್ತು ಮತ್ತು ಓದಿ – ಬರೆಯುವ ಹವ್ಯಾಸಕ್ಕೆ ಪ್ರೇರಣೆ ನೀಡಿದವರು. ಸಮಾಜದ ಪ್ರತಿಯೊಬ್ಬರಿಗೂ ಆಪ್ತರಾಗಿದ್ದ ಅವರ ಸ್ಮರಣೆ ನಮಗೆ ಖುಷಿ ನೀಡುತ್ತದೆ ಎಂದ ಅವರು ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಕಲಿಸಿದ್ದರು ಎಂದರು.

ಫಾಯ್ದೆಯವರ ಅಂಚೆ ಚೀಟಿ ಮತ್ತು ಕ್ಯಾಲೆಂಡರ್ ಸಂಗ್ರಹಗಳ ಪ್ರದರ್ಶನವನ್ನು ಉದ್ಘಾಟಿಸಿದ ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಬಹುಮುಖ ಪ್ರತಿಭೆ ಹೊಂದಿದ್ದ ಫಾಯ್ದೆ ಮಾಸ್ತರರ ಬದುಕೇ ಒಂದು ಸಂದೇಶವಾಗಿದೆ. ಅವರ ನಡೆ, ನುಡಿಗಳೆಲ್ಲವೂ ಮಾದರಿ ಮತ್ತು ಸ್ಪೂರ್ತಿದಾಯಕವಾಗಿದ್ದು ಎಂದರು.

300x250 AD

ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸೂರ್ಯನಾರಾಯಣ ಭಟ್ಟ ಮಾಳಕೊಪ್ಪ ಮಾತನಾಡಿ, ಜೀವನ ಪ್ರೀತಿಯಿಂದ ವೃತ್ತಿಪರರಾಗಿದ್ದ ಪಾಯ್ದೆ ಮಾಸ್ತರ್, ಬದುಕನ್ನು ಸಮಾಜಕ್ಕೆ ಸಂಪೂರ್ಣ ಸಮರ್ಪಿಸಿಕೊಂಡಿದ್ದರು ಎಂದರು. ಫಾಯ್ದೆಯವರ ಪುತ್ರ ಡಾ.ಪ್ರಸನ್ನ ಫಾಯ್ದೆ, ನಮ್ಮ ತಂದೆ ಸರಳತೆ, ಸಜ್ಜನಿಕೆಗಳನ್ನು ಬಾಲ್ಯದಿಂದಲೇ ಕಲಿಸಿದ ಆದರ್ಶವಾದಿ ಎಂದರು. ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಪತ್ರಕರ್ತ ನರಸಿಂಹ ಸಾತೊಡ್ಡಿ ಮಾತನಾಡಿದರು.

ವಿದ್ಯಾರ್ಥಿನಿಯರ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕ.ಸಾ.ಪ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ ಸ್ವಾಗತಿಸಿದರು. ಎಂ.ವಿ.ಹೆಗಡೆ ನಿರ್ವಹಿಸಿದರು. ಪ್ರೌಢಶಾಲಾ ಮುಖ್ಯಾಧ್ಯಾಪಕ ಲೊಕೇಶ ಗುನಗಾ ವಂದಿಸಿದರು. ಉಮ್ಮಚಗಿಯ ಸಂಸ್ಕೃತ ಮಹಾ ಪಾಠಶಾಲಾ ಅಧ್ಯಾಪಕ ವಿದ್ವಾನ್ ಶಂಕರ ಭಟ್ಟ ಫಾಯ್ದೆಯವರ ಕುರಿತು ರಚಿಸಿದ ಕವನವನ್ನು ವಾಚಿಸಿದರು.

Share This
300x250 AD
300x250 AD
300x250 AD
Back to top