Slide
Slide
Slide
previous arrow
next arrow

ಕ್ರೀಡಾಕೂಟ: ಹಿತೇಶ ಸುತಾರ್ ರಾಜ್ಯ ಮಟ್ಟಕ್ಕೆ ಆಯ್ಕೆ

300x250 AD

ಶಿರಸಿ: ಶಾಲಾ ಶಿಕ್ಷಣ ಇಲಾಖೆ ಮತ್ತು ರಾಮನಗರದ ಮೌಂಟ್ ಕಾರ್ಮೆಲ್ ಸಿ.ಬಿ.ಎಸ್.ಸಿ ಶಾಲೆಯ ಸಹಯೋಗದಲ್ಲಿ ನಡೆಸಲಾದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವೈಯಕ್ತಿಕ ಆಟದಲ್ಲಿ ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ಹಿತೇಶ ಸುತಾರ್ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.

ಈ ವಿದ್ಯಾರ್ಥಿಗೆ ಶಾಲೆಯ ದೈಹಿಕ ಶಿಕ್ಷಕಿ ಚೇತನಾ ಪಾವಸ್ಕರ್ ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಯ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕ-ಶಿಕ್ಷಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಪಾಲಕರ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top