ಹಳಿಯಾಳ: ಜಿಲ್ಲಾ ಕುಸ್ತಿ ಸಂಘ ಹಾಗೂ ಕುಸ್ತಿ ಅಭಿಮಾನಿಗಳ ಬಳಗದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಇಂಟ್ರಾಮೊರಲ್ ಕುಸ್ತಿ ಸ್ಪರ್ಧೆ ಪಟ್ಟಣದ ಕುಸ್ತಿ ಅಖಾಡದಲ್ಲಿ ಜರುಗಿತು.
ಹುಬ್ಬಳ್ಳಿಯ ಶ್ರೀ ಸದ್ಗುರು ಸಿದ್ಧಾರೂಢ ಮಠದ ಯಶವಂತಾನAದ ಸ್ವಾಮೀಜಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕುಸ್ತಿಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಹಳಿಯಾಳದ ಹೆಸರು ತರುವಲ್ಲಿ ಯಶಸ್ವಿಯಾಗಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕು ಸಂಯೋಜಕ ತುಕಾರಾಮ ಗೌಡ ಸೇರಿ ಹಲವರು ಉಪಸ್ಥಿತರಿದ್ದರು.