Slide
Slide
Slide
previous arrow
next arrow

ಗ್ರಾಮೀಣ ಕೃಷಿ ಸಹಕಾರಿ ವಾರ್ಷಿಕ ಸಭೆ; ಗ್ರಾಹಕರಿಗೆ ಸನ್ಮಾನ

300x250 AD

ಸಿದ್ದಾಪುರ: ತಾಲೂಕಿನ ಇಟಗಿಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಇಟಗಿಯ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ರಮೇಶ ಹೆಗಡೆ ಕೊಡ್ತಗಣಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಸಂಘದ ಮೂಲಕ ಹೆಚ್ಚಿನ ಅಡಕೆ ವಿಕ್ರಿ ಮಾಡಿ ಉತ್ತಮ ವ್ಯವಹಾರ ಮಾಡಿದ ವಿರೇಂದ್ರ ಗೌಡರ್ ಬೈಲಳ್ಳಿ ಹಾಗೂ ರಾಮ ಗೌಡ ಹರ್ಗಿ ಇವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

300x250 AD

ಸಂಘದ ಉಪಾಧ್ಯಕ್ಷ ಮಹಾಬಲೇಶ್ವರ ಬೀರಾ ನಾಯ್ಕ ಕಾನಳ್ಳಿ ಹಾಗೂ ಆಡಳಿತ ಮಂಡಳಿಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕ ಎಂ.ಜಿ.ಹೆಗಡೆ ವಾರ್ಷಿಕ ವರದಿ ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ನಾರಾಯಣ ಮೂರ್ತಿ ಹೆಗಡೆ ಹರ್ಗಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

Share This
300x250 AD
300x250 AD
300x250 AD
Back to top