Slide
Slide
Slide
previous arrow
next arrow

ಸೇವಾ ಕಾರ್ಯದಿಂದ ಜೋಶಿ ಶಾಶ್ವತವಾಗಿ ನೆನಪಿನಲ್ಲಿರುತ್ತಾರೆ: ಡಾ.ರವಿ

300x250 AD

ಸಿದ್ದಾಪುರ: ಸಿದ್ದಾಪುರ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ, ವಲಯ ಅಧ್ಯಕ್ಷರಾಗಿ ಮತ್ತು ಪ್ರಾದೇಶಿಕ ಅಧ್ಯಕ್ಷರಾಗಿ ಜನಪರ ಸೇವಾ ಕಾರ್ಯದಲ್ಲಿ ತತ್ಪರರಾಗಿದ್ದರು. ತಮ್ಮ ದುಡಿಮೆಯ ಬಹುಬಾಗವನ್ನು ಸಾರ್ವಜನಿಕ ಒಳಿತಿಗಾಗಿ ಸಮರ್ಪಿಸಿಕೊಂಡ ಶ್ರೇಷ್ಠ ವ್ಯಕ್ತಿಯೆಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ ಅವರು ಹೇಳಿದರು.

ಇತ್ತೀಚೆಗೆ ನಿಧನರಾದ ಲಯನ್ ಎಂ.ಎಸ್.ಜೋಶಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದರು. ಸ್ಥಳೀಯ ಟಿ.ಎಂ.ಎಸ್. ಅಧ್ಯಕ್ಷ ಹಾಗೂ ಸರಕಾರಿ ಧುರೀಣ ಆರ್.ಎಂ. ಹೆಗಡೆ ಬಾಳೇಸರ ಅವರು ಮಾತನಾಡಿ ಕೋಟ್ಯಾಂತರ ರೂಪಾಯಿಯನ್ನು ಶಿಕ್ಷಣ ಮತ್ತು ಸಾಮಾಜಿಕ ಕೆಲಸ ಕಾರ್ಯಗಳಿಗೆ, ದೇವಸ್ಥಾನಗಳ ಹಾಗೂ ಶಾಲಾ ಕಟ್ಟಡಗಳಿಗೆ ಉದಾರವಾಗಿ ನೀಡಿದ್ದು ಅವರ ಸೇವಾ ಕಾರ್ಯ ಎಲ್ಲರಿಗೂ ಆದರ್ಶವಾದುದು ಎಂದು ಹೇಳಿ ಶ್ರದ್ಧಾಂಜಲಿ ಕೋರಿದರು.

ಲಯನ್ಸ್ ಮಾಜಿ ಅಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡ ಮಾತನಾಡಿ ಶಿಕ್ಷಣದ ಪ್ರಸಾರಕರಾಗಿ ಅನೇಕ ಕಡೆಗಳಲ್ಲಿ ದಾನರೂಪದಲ್ಲಿ ಹಣವನ್ನು ನೀಡಿದ್ದು ಕೆಲವು ವಿದ್ಯಾಲಯಗಳಿಗೆ ಸ್ಥಿರ ನಿಧಿ ರೂಪದಲ್ಲಿ ಹಣವನ್ನು ದಾನವಾಗಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ನಿವೃತ್ತರಾಗಿದ್ದು ಇಲಾಖೆಯಲ್ಲಿಯೂ ಕೂಡ ಉತ್ತಮ ಹೆಸರನ್ನು ಗಳಿಸಿದ್ದಾರೆ ಎಂದು ಹೇಳಿದರು.

300x250 AD

ಲಯನ್ಸ್ ಮಾಜಿ ಅಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡ್ಮನೆ ಮಾತನಾಡಿ, ಅನೇಕರ ಬದುಕಿಗೆ ಚೇತೋಹಾರಿಯಾಗಿ ಸಹಕರಿಸಿದ್ದು ಅವರ ಉದಾರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ.ಪಾಟೀಲ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ನಾಗರಾಜ ಎಂ. ದೋಶೆಟ್ಟಿ, ಎಂ.ಆರ್. ಪಾಟೀಲ, ನಾಗರಾಜ ಪಾಟೀಲ, ಎ.ಜಿ. ನಾಯ್ಕ, ಸತೀಶ ಗೌಡರ್ ಹೆಗ್ಗೋಡ್ಮನೆ, ಇಂದೂಧರ ಪಾಟೀಲ, ಅನಿಲ ದೇವನಳ್ಳಿ ಮತ್ತು ಕಾರ್ಯದರ್ಶಿ ಕುಮಾರ ಗೌಡರ್ ಹೊಸೂರು ಅವರುಗಳು ಸಂತಾಪ ಕೋರಿದರು.

Share This
300x250 AD
300x250 AD
300x250 AD
Back to top