Slide
Slide
Slide
previous arrow
next arrow

ಸರ್ಕಾರಿ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ಜನತಾ ದರ್ಶನ: ಡಿಸಿ

300x250 AD

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಕಾರ್ಯಕ್ರಮವು ಸೆ.25ರಂದು ಕಾರವಾರದ ಸಾಗರದರ್ಶನ ಹಾಲ್‌ನಲ್ಲಿ ನಡೆಯಲಿದ್ದು, ಸಾರ್ವಜನಿಕರು ಯಾವುದೇ ಕುಂದು- ಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಿ ಇಲ್ಲಿ ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿರಲಿದ್ದಾರೆ. ಯಾವುದೇ ಸರ್ಕಾರಿ ಕೆಲಸ ಆಗದೇ ಉಳಿದು ಹೋಗಿದ್ದರೆ, ಕಚೇರಿಗಳಿಗೆ ಅಲೆಯುತ್ತಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದರೆ, ಕೆಲವೊಮ್ಮೆ ಯಾವುದೋ ಕಾರಣಗಳಿಂದ ಕೆಲಸ ಆಗದೆ ತೊಂದರೆ ಅನುಭವಿಸುತ್ತಿದ್ದರೆ ಅವರಿಗಾಗಿ ಈ ಜನತಾ ದರ್ಶನವನ್ನ ಆಯೋಜಿಸಲಾಗುತ್ತಿದೆ. ದಿನನಿತ್ಯದ ಕರ್ತವ್ಯದ ಜೊತೆಗೆ ಹೆಚ್ಚುವರಿ ಕೆಲಸವನ್ನ ಅಧಿಕಾರಿಗಳು ಇಲ್ಲಿ ಮಾಡಲಿದ್ದಾರೆ. ಒಂದೇ ವೇದಿಕೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.

300x250 AD

ಪ್ರತಿ 15 ದಿನಕ್ಕೊಮ್ಮೆ ತಾಲೂಕು ಮಟ್ಟದಲ್ಲೂ ಜಿಲ್ಲಾಧಿಕಾರಿ ಜನತಾ ದರ್ಶನ ಇರಲಿದೆ. ಉಪವಿಭಾಗಾಧಿಕಾರಿಗಳು, ತಹಶಿಲ್ದಾರರು ಕೂಡ ಇನ್ನುಮುಂದೆ ಜನತಾ ದರ್ಶನ ಮಾಡಲಿದ್ದಾರೆ. ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಅರ್ಜಿಗಳನ್ನ ಸ್ವೀಕರಿಸಲು ಆಯಾ ಇಲಾಖೆಗಳಿಂದ ಸಿಬ್ಬಂದಿಗಳನ್ನ ನೇಮಿಸಿ ವ್ಯವಸ್ಥೆ ಮಾಡಲಿದ್ದಾರೆ. ಹೆಲ್ಪ್ ಡೆಸ್ಕ್ ಕೂಡ ಸ್ಥಳದಲ್ಲಿ ಇರಲಿದೆ. ಸಾರ್ವಜನಿಕರ ಅರ್ಜಿಗಳನ್ನ ಸ್ಕ್ಯಾನ್ ಮಾಡಿ ಸಿಬ್ಬಂದಿ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವ ಮೂಲಕ ಸಂಬAಧಪಟ್ಟ ಇಲಾಖೆಗೆ ಕಳುಹಿಸಲಿದ್ದಾರೆ. ವಾರ- 15 ದಿನದೊಳಗೆ ಅರ್ಜಿಯನ್ನ ಅಧಿಕಾರಿಗಳು ವಿಲೇವಾರಿ ಮಾಡಲಿದ್ದಾರೆ. ತೆಗೆದುಕೊಂಡ ಕ್ರಮಗಳ ಬಗ್ಗೆ ಕೂಡ ವೆಬ್‌ಸೈಟ್‌ನಲ್ಲೇ ನಮೂದಿಸಲಿದ್ದಾರೆ. ಇ- ಗವರ್ನೆನ್ಸ್ನಿಂದ ರಾಜ್ಯ ಮಟ್ಟಕ್ಕೆ ಈ ಅರ್ಜಿಗಳ ಮಾಹಿತಿ ಸಲ್ಲಿಕೆಯಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆಗಳನ್ನು ಇಲ್ಲಿ ಪರಿಹರಿಸಿಕೊಳ್ಳಬಹುದಾಗಿದ್ದು, ಸರ್ಕಾರಿ ಅಧಿಕಾರಿಗಳು ಅಹವಾಲು ಕೇಳಲು ತಯಾರಿದ್ದಾರೆ ಎಂದರು.

Share This
300x250 AD
300x250 AD
300x250 AD
Back to top