ಸಿದ್ದಾಪುರ: ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪಶುಸಂಗೋಪನಾ ಇಲಾಖೆಯಿಂದ ತಾಲೂಕಿನಾದ್ಯಂತ ಸೆ.26ರಿಂದ ಅಕ್ಟೋಬರ್ 25ರವರೆಗೆ ಕಾಲು ಮತ್ತು ಬಾಯಿ ರೋಗದ ವಿರುದ್ಧ ಮುಂಜಾಗೃತೆಯಾಗಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.
ತಾಲೂಕಿನಲ್ಲಿ 40615 ಜಾನುವಾರುಗಳಿದ್ದು, 18 ಲಸಿಕಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ತಾಲೂಕಿನ ರೈತರ ಮನೆಗಳಿಗೆ ಲಸಿಕಾ ಸಿಬ್ಬಂದಿಗಳು ಆಗಮಿಸಿದಾಗ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಸಹಕರಿಸುವಂತೆ ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.