Slide
Slide
Slide
previous arrow
next arrow

ಕ್ರೀಡಾಕೂಟ: ವಸತಿ ಶಾಲಾ ವಿದ್ಯಾರ್ಥಿಗಳ ಸಾಧನೆ

300x250 AD

ಅಂಕೋಲಾ: ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ತಾಲೂಕ ಮಟ್ಟದ ಕ್ರೀಡಾಕೂಟವು ಇತ್ತೀಚಿಗೆ ನಡೆಯಿತು.

ಹೊನ್ನೇಕೇರಿಯ ಇಂದಿರಾಗಾ0ಧಿ ವಸತಿ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕಿಯರ ಖೋ-ಖೋ ತಂಡ ಜಯವನ್ನು ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಸ್ಥಾನ ಪಡೆದುಕೊಂಡಿತು. ಪ್ರಾಥಮಿಕ ವಿಭಾಗದ ಯೋಗ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಬಾದಲ ಗೌಡ ಖುಷಿ ಕಾಂಬ್ಳೆ ಪ್ರಥಮ ಸ್ಥಾನ ಪಡೆದುಕೊಂಡರು.

ಟಿ. ಜಿ. ಟಿ ವಿಭಾಗದಲ್ಲಿ ಅಯಾನ್ ಖಾನ್ ಚೆಸ್ ನಲ್ಲಿ ಪ್ರಥಮ ಸ್ಥಾನ, ಹಾಗೂ ಪ್ರೌಢ ವಿಭಾಗದ ಬಾಲಕಿಯರ ಯೋಗ ಸ್ಪರ್ಧೆಯಲ್ಲಿ ನಮೃತಾ ನಾಯಕ, ಮಾನ್ಯಶ್ರೀ ಕರೆಪೂಜಾರ,ಸುನಿಧಿ ಗೌಡ, ಧನ್ಯಾ ಕಾಂಬ್ಳೆ ಪ್ರಥಮ ಸ್ಥಾನ, ಬಾಲಕರ ಯೋಗ ಸ್ಪರ್ಧೆಯಲ್ಲಿ ಭರತ ಗೌಡ, ಆದರ್ಶ ಮಾದರ, ಮೈಲಾರಿ, ಮತ್ತು ಗಣೇಶ ನಾಯ್ಕ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಬಾಲಕಿಯರ ಕಬ್ಬಡಿ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

300x250 AD

ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಲಲಿತಾ ಗೌಡ, ತಂಡದ ಮೇಲ್ವಿಚಾರಕರಿಗೆ ವಸತಿ ಶಾಲೆಯ ಪ್ರಾಂಶುಪಾಲರಾದ ವಿನೋದ ಗಾಂವಕರ ಹಾಗೂ ಭೋಧಕ ಭೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top