Slide
Slide
Slide
previous arrow
next arrow

‘ಹಿಟ್ ಆ್ಯಂಡ್ ರನ್’ ಆರೋಪಿಯ ಬಂಧನ

300x250 AD

ಕಾರವಾರ: ಅಪಘಾತಪಡಿಸಿ ವ್ಯಕ್ತಿಯೋರ್ವರ ಸಾವಿಗೆ ಕಾರಣವಾಗಿ ತಲೆಮರೆಸಿಕೊಂಡಿದ್ದ ‘ಹಿಟ್ ಆ್ಯಂಡ್ ರನ್’ ಆರೋಪಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸೆ.19ರಂದು ರಾತ್ರಿ ವೇಳೆಯಲ್ಲಿ ಬಿಣಗಾ ಘಟ್ಟದ ಡಿವೈಡರ್ ಹತ್ತಿರ ಸ್ಕೂಟರ್‌ಗೆ ಅಪಘಾತವಾಗಿ ನಿವೃತ್ತ ನೌಕಾಪಡೆ ನೌಕರ, ಹೈಚರ್ಚ್ ರಸ್ತೆ ನಿವಾಸಿಯಾಗಿದ್ದ ಶಂಭುನಾಥ ಗಿರಿ (63) ಮೃತಪಟ್ಟಿದ್ದರು. ಅಪಘಾತ ಪ್ರಕರಣದಲ್ಲಿ ಅಪಘಾತಪಡಿಸಿದ್ದ ಆರೋಪಿ ಮತ್ತು ವಾಹನದ ಮಾಹಿತಿ ದೊರಕಿರಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಹಾಗೂ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಸೂಕ್ತ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಸಿದ್ದಪ್ಪ ಎಸ್.ಬೀಳಗಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

300x250 AD

ಪಿಎಸ್‌ಐಗಳಾದ ದೇವೇಂದ್ರ ನಾಯ್ಕ್, ಪರಶುರಾಮ್ ಬಿ.ಎಂ. ಹಾಗೂ ಸಿಬ್ಬಂದಿ ಶಿವಪ್ರಸಾದ್, ಸುನೀಲ್, ರಾಜೇಶ್ ಗದಿಗೆಪ್ಪಾ, ಮೌಲಾಲಿ, ಸತ್ಯಾನಂದ, ಅನೀಲ್, ಪ್ರಕಾಶ ಮತ್ತು ಇತರೆ ಸಿಬ್ಬಂದಿಯವರ ಅವಿರತ ಶ್ರಮದಿಂದ ವೈಜ್ಞಾನಿಕ ತನಿಖಾ ತಂತ್ರ ಬಳಸಿ ಶಿವಮೊಗ್ಗದ ಸಾಗರದ ಮಹೇಶ್ ನಾರಾಯಣ ಎನ್ನುವಾತನನ್ನು ವಾಹನ ಸಮೇತ ಪತ್ತೆ ಮಾಡಿ ಬಂಧಿಸಿದ್ದಾರೆ.

Share This
300x250 AD
300x250 AD
300x250 AD
Back to top