ಶಿರಸಿ: ತಾಲೂಕಿನ ಬಿದ್ರಳ್ಳಿಯ ತಿಲಕ ನಾಯ್ಕ ಎನ್ನುವವರ ಮನೆಯ ಸಮೀಪದ ಬೇಲಿಗೆ ಕಟ್ಟಲಾಗಿದ್ದ ಪ್ಲಾಸ್ಟಿಕ್ ಬಲೆಯಲ್ಲಿ ಸಿಲುಕಿದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಶನಿವಾರ ನಡೆದಿದೆ.
ಸುಮಾರು 10 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಬೇಲಿಗೆ ಹಾಕಿದ ಬಲೆಗೆ ಸಿಲುಕಿ ಮುಂದೆ ತೆರಳಲಾರದೇ ಒದ್ದಾಡುತ್ತಿರುವುದನ್ನು ಗಮನಿಸಿದ ತಿಲಕ ನಾಯ್ಕ, ಉಂಚಳ್ಳಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಮಂಜುನಾಥ ಹಾಗೂ ಕೋಟೆಗುಡ್ಡೆಯ ಮಂಜಣ್ಣ, ಬಲೆಯನ್ನು ತುಂಡರಿಸಿ, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯಕ್ಕೆ ಬಿಟ್ಟಿದ್ದಾರೆ.
ಅರಣ್ಯ ಇಲಾಖೆಯವರ ಕಾರ್ಯಕ್ಕೆ ಸ್ಥಳೀಯ ಜನತೆ ಮೆಚ್ಚುಗೆ ವ್ಯಕ್ಯಪಡಿಸಿ, ನಿಟ್ಟುಸಿರು ಬಿಟ್ಟಿದ್ದಾರೆ.