ಸಿದ್ದಾಪುರ: ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದ ಆವರಣದಲ್ಲಿ ಗಣೇಶ ಹೇರೂರು ಮತ್ತು ಕುಟುಂಬದವರು ಆಯೋಜಿಸಿರುವ 68ನೇ ವರ್ಷದ ಯಕ್ಷಗಾನ ತಾಳಮದ್ದಳೆ, ದೇವತಾರಾಧನೆ ಮತ್ತು ಮಿತ್ರಭೋಜನ ಸೆ.25ರಂದು ಜರುಗಲಿದೆ.
ಬೆಳಗ್ಗೆ ದೇವಾಲಯದಲ್ಲಿ ದೇವತಾರಾಧನೆ, ಸಂಜೆ 4ರಿಂದ ವಾಲಿಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಅನಂತ ಪದ್ಮನಾಭ ಫಾಠಕ್ ಕಾರ್ಕಳ ಪಾಲ್ಗೊಳ್ಳಲಿದ್ದಾರೆ. ಮುಮ್ಮೇಳದಲ್ಲಿ ವಿಶ್ವೇಶ್ವರ ಭಟ್ಟ ಸುಣ್ಣಂಬಳ, ವಿ.ಹಿರಣ್ಯ ವೆಂಕಟೇಶ ಭಟ್ಟ, ವಾಸುದೇವ ರಂಗಾ ಭಟ್ಟ ಮಧೂರು, ಸೀತಾರಾಮ ಚಂದು ಶಿರಸಿ ವಿವಿಧ ಪಾತ್ರನಿರ್ವಹಿಸಲಿದ್ದಾರೆ ಎಂದು ಸಂಘಟಕ ಗಣೇಶ ಹೇರೂರು ತಿಳಿಸಿದ್ದಾರೆ.