Slide
Slide
Slide
previous arrow
next arrow

ಹೃದಯಾಘಾತದಿಂದ ಭಾಗವತ ರಾಮಚಂದ್ರ ನಾಯ್ಕ ನಿಧನ

300x250 AD

ಸಿದ್ದಾಪುರ: ಮಲೆನಾಡಿನ ಕೋಗಿಲೆ ಎಂದೇ ಖ್ಯಾತರಾದ, ನಾಡಿನ ಹೆಮ್ಮೆಯ ಅದ್ಭುತ ಕಂಠಸಿರಿಯ ಯಕ್ಷಗಾನ ಭಾಗವತರೂ, ಕೃತಿ ರಚನಾಕಾರರಾದ ರಾಮಚಂದ್ರ ನಾಯ್ಕ (56) ಹೆಮ್ಮನಬೈಲ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಒಂದು ಗಂಡು, ಒಂದು ಹೆಣ್ಣು ಮಗಳು, ಪತ್ನಿ ಹಾಗೂ ಅಪಾರ ಬಂಧು- ಬಳಗ, ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಅಪಾರ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಕೋಟ, ಉಡುಪಿಯ ಶಿವರಾಮ ಕಲಾ ಕೇಂದ್ರದಲ್ಲಿ ಶಾಸ್ತ್ರೋಕ್ತವಾಗಿ ಭಾಗವತಿಯನ್ನು ಅಧ್ಯಯನ ಮಾಡಿ ಕನ್ನಡ ನಾಡಿನ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಉತ್ತಮ ಭಾಗವತರಾಗಿ,ಸುಮಧುರವಾದ ಕಂಠಸಿರಿಯಿAದ ಜನಮನ:ದಲ್ಲಿ ನೆಲೆಯಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಸಾಲಿಗ್ರಾಮ, ಪೆರ್ಡೂರು, ಸಿಗಂದೂರು, ಅಮ್ರತೇಶ್ವರಿ, ಗೋಳಿಗರಡಿ, ಮಡಾಮಕ್ಕಿ, ಹಾಲಾಡಿ, ಹಳ್ಳಿಯ ಹವ್ಯಾಸಿ ಮೇಳಗಳಾದ ಹೆಮ್ಮನಬೈಲ್, ಸೇರಿದಂತೆ ಅನೇಕ ಮೇಳಗಳಲ್ಲಿ ಭಾಗವತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶ್ರೀ ನಾಗಚೌಡೇಶ್ವರಿ, ಹಾಗೂ ಶೃಂಗಾರಪ್ರಿಯ ನಾಗಚೌಡೇಶ್ವರಿ ಹಳಿಯಾಳ ಎಂಬ ಎರಡು ಯಕ್ಷಗಾನಗಳು ಜನಮನಸೂರೆಗೊಂಡಿದ್ದವು. ಈಗ ಮತ್ತೊಂದು ಯಕ್ಷಗಾನ ಬರೆದಿದ್ದು, ಸದ್ಯ ಅದರ ಬಿಡುಗಡೆ ನಡೆಯುವುದಿತ್ತು.

300x250 AD

ಕೋಲಸಿರ್ಸಿ ಭಗವಾನ್ ಸತ್ಯ ಸಾಯಿ ಸೇವಾ ಸಮಿತಿ, ಜಲವಳ್ಳಿ ಯುವಕ ಸಂಘ, ಸಿದ್ದಾಪುರ ಕನ್ನಡ ಸಾಹಿತ್ಯ ಸಮ್ಮೇಳನ, ಚಂದ್ರ ಜೈ ಮಾರುತಿ ಮಿತ್ರ ಮಂಡಳಿ, ತೀರ್ಥಹಳ್ಳಿ ಮ್ರಗವಧೆ ಜಾತ್ರಾ ಸಮಿತಿ, ತೀರ್ಥಹಳ್ಳಿ ಹುಣ್ಸೆಕೇವಿ ಅಭಿಮಾನಿ ಬಳಗ, ಶ್ರೀ ಕ್ಷೇತ್ರ ತೆರಳಿ ಮಠ, ಹಲವರಿಂದ ಸನ್ಮಾನಗಳಿಗೆ ಭಾಜನರಾಗಿದ್ದರು. ಬಿಲ್ಲವ ಕಲಾವಿದರ ಸಮಾವೇಶ ಉಡಪಿ-2005, 2009ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕೋಲಸಿರ್ಸಿ, 2009 ರಲ್ಲಿ ಹಲಗೇರಿ ಪದವಿ ಪೂರ್ವ ಕಾಲೇಜು, 2011ರಲ್ಲಿ ನಾಣಿಕಟ್ಟಾ ಪದವಿ ಪೂರ್ವ ಕಾಲೇಜು, 2018ರಲ್ಲಿ ಶ್ರೀ ಸಿಗಂದೂರು ಚೌಡಯ್ಯ ಎಜ್ಯುಕೇಶನಲ್ & ಚ್ಯಾರಿಟೇಬಲ್ ಟ್ರಸ್ಟ್ ಗಳಿಂದ ಅಭಿನಂದನಾ ಪತ್ರ ಪಡೆದುಕೊಂಡಿದ್ದರು.

ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ, ವಸಂತ ನಾಯ್ಕ ಮನ್ಮನೆ, ವಿ.ಎನ್.ನಾಯ್ಕ ಬೇಡ್ಕಣಿ, ನಾಗರಾಜ ನಾಯ್ಕ ಬೇಡ್ಕಣಿ, ಕೋಲಸಿರ್ಸಿಯ ಕೆ.ಆರ್.ವಿನಾಯಕ, ಬಾಲಕೃಷ್ಣ ನಾಯ್ಕ, ಯಕ್ಷಗಾನ ಕಲಾವಿದರಾದ ಕೃಷ್ಣ್ ಜಿ.ಬೇಡ್ಕಣಿ, ಎಮ್.ಆರ್.ನಾಯ್ಕ, ಎಮ್.ಆರ್.ಬಟ್ಟಿ, ಉದಯ ಕಲ್ಲಾಳ ಸೇರಿದಂತೆ ಕಲಾವಿದರು, ಅಭಿಮಾನಿಗಳು ಅಂತಿಮ ದರ್ಶನ ಪಡೆದುಕೊಂಡರು.

Share This
300x250 AD
300x250 AD
300x250 AD
Back to top