ಶಿರಸಿ: ಗೃಹ ಜ್ಯೋತಿ ಯೋಜನೆಯಡಿ ನೊಂದಣಿ ಮಾಡಿಕೊಂಡಿರುವ ಗ್ರಾಹಕರುಗಳಿಗೆ ಜುಲೈ-2023 ನೇ ತಿಂಗಳಿನಲ್ಲಿ ಬಳಸಿದ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ವಿತರಿಸಿದ್ದು, ಅದರ ಹಿಂದಿನ ತಿಂಗಳಿನಲ್ಲಿ ಬಾಕಿ ಉಳಿದಿದ್ದರೆ ಅಂತಹ ಮೊತ್ತ ಮಾತ್ರ ಬಿಲ್ನಲ್ಲಿ ನಮೂದಿಸಿ ನೀಡಲಾಗಿದೆ ಎಂದು ಹೆಸ್ಕಾಂ ಕಚೇರಿಯು ತಿಳಿಸಿದೆ.
ವಿದ್ಯುತ್ ಬಾಕಿ ಪಾವತಿಸಲು ಸರ್ಕಾರವು ಸೆಪ್ಟೆಂಬರ್-2023 ರ ಅಂತ್ಯದವರೆಗೆ ಸಮಯಾವಕಾಶ ನೀಡಿದ್ದು, ಅಷ್ಟರೊಳಗೆ ಬಾಕಿ ಪಾವತಿಸದೇ ಇದ್ದಲ್ಲಿ, ಅಂತಹ ಗ್ರಾಹಕರನ್ನು ಗೃಹಜ್ಯೋತಿ ಯೋಜನೆಯಿಂದ ಕೈಬಿಡಲಾಗುವುದೆಂದು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.