Slide
Slide
Slide
previous arrow
next arrow

ಕ್ರೀಡಾಕೂಟ: ಸರಸ್ಪತಿ ವಿದ್ಯಾಲಯದ ಪ್ರಿಯಾ ಭಾಮೆಕರಗೆ ವೀರಾಗ್ರಣಿ

300x250 AD

ಕಾರವಾರ: ಯುನಿಟಿ ಪ್ರೌಢಶಾಲೆ ಕಾಜುಬಾಗ ಸಂಘಟಿಸಿದ್ದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸರಸ್ಪತಿ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕಿಯರ ವಿಭಾಗದಲ್ಲಿ ಪ್ರಿಯಾ ಭಾಮೆಕರ ಇವರು 800, 1500, 3000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.

ಕೀರ್ತಿ ಕನ್ನೂರ 800, 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅಕ್ಷತಾ ಅಂಕಲಗಿ 3000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಸುರಕ್ಷಾ ಅಳಕರ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ಐಶ್ವರ್ಯಾ ಶೇಟ್ 3 ಕಿ.ಮೀ, ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಬಾಲಕರ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

300x250 AD

ಇವರ ಈ ಸಾಧನೆಗೆ ಹಾಗೂ ತರಬೇತಿ ನೀಡಿದ ಪ್ರಕಾಶ ರೇವಣಕರ ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹಾದೇವ ಠಾಣೆ, ಕುಮಾರ ಎಂ.ಪೂಜಾರ ಇವರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಶುಭಲತಾ ಅನ್ನೋಟಿಕರ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲಾ ಮುಖ್ಯಾಧ್ಯಾಪಕ ಎ.ಎಮ್.ಮಣಿ ಹಾಗೂ ಶಾಲಾ ಶಿಕ್ಷಕ ಶಿಕ್ಷಕಿಯರು, ಸಿಬ್ಬಂದಿಗಳು, ನಗರಸಭೆಯ ಸದಸ್ಯ ಪ್ರೇಮಾನಂದ ಗುನಗಾ, ಗಿರೀಶ ಎಸ್.ರಾವ್, ಶಾಲೆಯ ವಿದ್ಯಾರ್ಥಿಗಳು, ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top