Slide
Slide
Slide
previous arrow
next arrow

ಅನುದಾನಿತ ನೌಕರರ ಸಹಕಾರ ಸಂಘಕ್ಕೆ ರೂ.57 ಲಕ್ಷ ಲಾಭ: ಸದಸ್ಯರಿಗೆ ಶೇ.23 ಲಾಭಾಂಶ ಪ್ರಕಟ

300x250 AD

ಶಿವಮೊಗ್ಗ: ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ, ನಿಯಮಿತವು ತನ್ನ ಸದಸ್ಯರಿಗೆ 2022-23ನೇ ಸಾಲಿಗೆ ಶೇ.23ರಷ್ಟು ಲಾಭಾಂಶ ಘೋಷಣೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಯೋಗೇಶ ಎಸ್.ಪ್ರಕಟಿಸಿದರು.

ಅವರು ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಸಂಘದ 36ನೇ ಸರ್ವ ಸದಸ್ಯರ ಸಭೆಯ, ಸೇವಾ ನಿವೃತ್ತಿ ಹೊಂದಿದ ಸದಸ್ಯರಿಗೆ ಮತ್ತು ಪ್ರಶಸ್ತಿ ವಿಜೇತರಿಗೆ ಆಡಳಿತ ಮಂಡಳಿಯಿoದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಹಣಕಾಸಿನ ವರ್ಷದ ಪ್ರಾರಂಭದಲ್ಲಿ ಸಂಘವು ರೂ.1,15,82,516-00ಗಳ ಅಧಿಕೃತ ಪಾಲು ಬಂಡವಾಳವನ್ನು ಹೊಂದಿದ್ದು ಅಮೃತ ನಿಧಿ, ಆರೋಗ್ಯ ನಿಧಿ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಿಧಿ, ಸಿಬ್ಬಂದಿ ಕಲ್ಯಾಣ ನಿಧಿ, ಪ್ರತಿಭಾಪುರಸ್ಕಾರ ದತ್ತಿ ನಿಧಿ ಮೊದಲಾದವುಗಳಿಗೆ ರೂ.2,59,00,758-00ನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಸಂಘವು ರೂ.12,29,12,589-00 ಠೇವಣಿಯನ್ನು ಹೊಂದಿದ್ದು, ರೂ.2,77,71,000-ವನ್ನು ಸದಸ್ಯರಿಗೆ ಸಾಲದ ರೂಪದಲ್ಲಿ ನೀಡಿದೆ. ದುಡಿಯುವ ಬಂಡವಾಲವು ರೂ.19,12,81,603-00 ಇದ್ದು ವರದಿ ಸಾಲಿನಲ್ಲಿ ಒಟ್ಟೂ ವಹಿವಾಟು ರೂ.47,95,44,969-00 ಆಗಿದು ರೂ.2,04,70,269-00 ಲಾಭ ಗಳಿಸಿರುತ್ತದೆ. ಇದರಲ್ಲಿ ಠೇವಣಿ ಮೇಲೆ ಪಾವತಿಸಿದ್ದ ಬಡ್ಡಿ, ಸಿಬ್ಬಂದಿ ವೇತನ, ಆಡಳಿತ ವೆಚ್ಚ ಹಾಗೂ ಕಾಯ್ದಿರಿಸಿದ ಬಾಬ್ತುಗಳ ಒಟ್ಟೂ ಮೊತ್ತ ರೂ.1,38,66,082-00 ಹಾಗೂ ವಸೂಲಾಗದ ಸಾಲದ ಬಾಬ್ತು (ಎನ್.ಪಿ.ಎ.) ರೂ.8,95,956-00ಗಳನ್ನು ಕಳೆದ ನಂತರ ನಿವ್ವಳ ಲಾಭ ರೂ.57,08,231-00ಗಳಿಸಿರುತ್ತದೆ ಎಂದು ಮಾಹಿತಿ ನೀಡಿದರು.

ಈ ಸಾಲಿನಲ್ಲಿ ಅಕಾಲಿಕ ಮರಣ ಹೊಂದಿದ ಸದಸ್ಯರ ವಾರಸುದಾರರಿಗೆ ಅಮೃತ ನಿಧಿಯಿಂದ ಒಟ್ಟೂ ರೂ.1,60,000-00ಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದ ಅವರು ಸಾಲ ವಸೂಲಾತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಸದಸ್ಯರು ತಾವು ಪಡೆದ ಸಾಲದ ಕಂತುಗಳನ್ನು ಸರಿಯಾದ ಸಮಯಕ್ಕೆ ಜಮಾ ಮಾಡುವುದರ ಮೂಲಕ ಸಂಘದ ಪ್ರಗತಿಗಾಗಿ ಸಹಕರಿಸಬೇಕೆಂದು ಸದಸ್ಯರನ್ನು ಕೋರಿದರು. ಖಜಾನೆ-2ರಲ್ಲಿ ಸಂಘದ ಕಡಿತಗಳನ್ನು ಸೇರಿಸಲು ಅನುವು ಮಾಡಿಕೊಟ್ಟಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಧನ್ಯವಾದ ಹೇಳಿದ ಅವರು ಎಲ್ಲ ಸದಸ್ಯರು ಮುಖ್ಯೋಪಾಧ್ಯಾಯರ ಮುಖಾಂತರ ಸಂಘದ ಕಡಿತಗಳನ್ನು ಕಡಿತಗೊಳಿಸಲು ಶಿವಮೊಗ್ಗ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒಪ್ಪಿಗೆ ನೀಡುವ ಮೂಲಕ ಸಂಘದ ಪುರೋಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

300x250 AD

ಇದೇ ಸಂದರ್ಭದಲ್ಲಿ ಅತ್ಯುತ್ತಮ ಎನ್.ಎಸ್.ಎಸ್.ಕಾರ್ಯಕ್ರಮಾದಿಕಾರಿ ಪ್ರಶಸ್ತಿಗೆ ಭಾಜನರಾದ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೆಗಡೆ, ಹಾಗೂ ಸಂಘದ ನಿವೃತ್ತ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯ ನಿರ್ದೇಶಕರಾದ ಡಾ.ಬಾಲಕೃಷ್ಣ ಹೆಗಡೆ, ದಿವಾಕರ ಡಿ.ಕೆ. ಪ್ರಶಾಂತ ಎಸ್.ಎಚ್., ರಘು ಬಿ.ಎಂ., ಇಮ್ತಿಯಾಜ್ ಅಹಮ್ಮದ್, ಪರಶುರಾಮಪ್ಪ ಪಿ. ಆರ್. ಯಶವಂತಕುಮಾರ ಎಸ್.ಆರ್. ಕೆಂಚಮ್ಮ ಆರ್., ಜ್ಯೋತಿ ಎಸ್.ಬಿ., ಗಿರಿಜವ್ವ ತಹಶೀಲ್ದಾರ, ಸುರೇಶ್ ಹೆಚ್.ವೈ. ಮಂಜಪ್ಪ ಎಸ್.ಆರ್., ರುದ್ರಗೌಡ ಮರ್ಕಳ್ಳಿ ಮೊದಲಾದವರಿದ್ದರು.

ಅನುಚಿತ ವರ್ತನೆ-ಹಿರೇಮಠ ಅಮಾನತು: ಸಂಘದ ಮಾಜಿ ಅಧ್ಯಕ್ಷರಾಗಿದ್ದ ಮೃತ್ಯುಂಜಯ ಎಸ್.ಹಿರೇಮಠ ಎನ್ನುವವರು ಈ ಸರ್ವಸದಸ್ಯರ ಸಭೆಯಲ್ಲಿ ಮೈಕ್ ಹಿಡಿದು ತಾಸು ಗಟ್ಟಲೆ ಒಬ್ಬರೇ ಏರಿದ ಧ್ವನಿಯಲ್ಲಿ ಕೇಳಿದ್ದೇ ಪ್ರಶ್ನೆ ಮತ್ತೆ ಮತ್ತೆ ಕೇಳುತ್ತ, ಸಭಾಧ್ಯಕ್ಷರು ಎಷ್ಟೇ ಬಾರಿ ಸರಿಯಾದ ಉತ್ತರ ನೀಡಿದರೂ ಉದ್ಧಟತನದಿಂದ ಮತ್ತೆ ಮತ್ತೆ ಪ್ರಶ್ನೆ ಕೇಳುವ ನೆಪದಲ್ಲಿ ಇಡೀ ಸಭೆಯನ್ನೇ ಗೊಂದಲಮಯವಾಗಿ ಮಾಡುತ್ತಿರುವ ದೃಶ್ಯ ಉಳಿದ ಸದಸ್ಯರನ್ನೂ ಕೆರಳಿಸಿತು. ಅಲ್ಲದೆ ವೇದಿಕೆಯಲ್ಲಿದ್ದ ಅಧ್ಯಕ್ಷರಿಗೆ, ಆಡಳಿತ ಮಂಡಳಿಯ ನಿರ್ದೇಶಕರಿಗೆ ಸಭಿಕರ ಸಮ್ಮುಖದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಲ್ಲದೆ ಸಭಾ ಮರ್ಯಾದೆ, ಗೌರವಕ್ಕೆ ಧಕ್ಕೆ ತರುವಂಥಹ ನಡವಳಿಕೆ ಪ್ರದರ್ಶಿಸಿದ್ದಕ್ಕಾಗಿ ಸದರಿ ಸಭೆಯಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧ್ಯಕ್ಷರು ಪ್ರಕಟಿಸಿದ ಘಟನೆಯೂ ನಡೆಯಿತು. ಓರ್ವ ಸದಸ್ಯ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅನುಚಿತ ವರ್ತನೆಯಿಂದ ಅಮಾನತುಗೊಂಡಿದ್ದು ಇದೇ ಮೊದಲು ಎಂದು ಇತರ ಸದಸ್ಯರು ಹೇಳಿದರು.

ನಿಯಮ ಅರಿತುಕೊಳ್ಳದೆ ವರ್ತಿಸಿದ ಸದಸ್ಯರು: ಸಂಘದಲ್ಲಿ ಸಾಲ ತೆಗೆದುಕೊಂಡು ಅದನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡದೆ ಸುಸ್ತಿದಾರರಾದ ತುಂಗಾ ಪ್ರೌಢ ಶಾಲೆಯ ಶಿವಕುಮಾರ ಎಸ್.ಎಲ್. ಮತ್ತು ಸ್ಯಾನ್ ಜೋನ್ಸ್ ಪ್ರೌಢ ಶಾಲೆಯ ಸತೀಶ ಬಿ. ಎನ್ನುವವರು ಸ್ವಾಗತ ನಡೆಯುತ್ತಿರುವಾಲೇ ಎದ್ದು ನಿಂತು ಮೈಕ್ ಹಿಡಿದು ಪ್ರಶ್ನೆ ಕೇಳಲು ಆರಂಭಿಸಿದಾಗ, ಸ್ವಾಗತ ಮುಗಿಲಿ. ಸಭೆ ಕೋರಂ ಘೋಷಣೆ ಆಗಲಿ. ನಂತರ ನಿಮ್ಮ ಪ್ರಶ್ನೆ ಕೇಳಿ ಎಂದು ಸಭಾಧ್ಯಕ್ಷರು ಎಷ್ಟೇ ಬಾರಿ ವಿನಂತಿಸಿದರೂ ಅದಕ್ಕೆ ಗೌರವ ಕೊಡದೆ ಉದ್ಧಟತನದ ಪ್ರದರ್ಶನ ಆರಂಭಿಸಿದಾಗ ಸಭಾಧ್ಯಕ್ಷರು, ನೋಡಿ ನೀವಿಬ್ಬರೂ ಸಾಲ ಪಡೆದು ಸರಿಯಾದ ಸಮಯದಲ್ಲಿ ಸಾಲ ಮರು ಪಾವತಿ ಮಾಡದೆ ಸುಸ್ತಿದಾರರಾಗಿದ್ದೀರಿ. ನಿಯಮದ ಪ್ರಕಾರ ನಿಮಗೆ ಸರ್ವ ಸದಸ್ಯರ ಸಭೆಯಲ್ಲಿ ಪ್ರಶ್ನೆ ಕೇಳುವ ಅಧಿಕಾರ ಇಲ್ಲ. ಸುಮ್ಮನೆ ಕುಳಿತುಕೊಳ್ಳಿ ಎಂದು ತಾಕೀತು ಮಾಡಿದ ಘಟನೆಯೂ ನಡೆಯಿತು.

Share This
300x250 AD
300x250 AD
300x250 AD
Back to top