Slide
Slide
Slide
previous arrow
next arrow

ದ್ವಾಪರ ಯುಗ ಸೃಷ್ಟಿಸಿದ ಯಶೋದಾ ಕೃಷ್ಣ ಸ್ಪರ್ಧೆ

300x250 AD

ಕುಮಟಾ: ಇಲ್ಲಿಯ ರೋಟರಿ ಏನ್ಸ್ ಕ್ಲಬ್‌ನವರು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಸಿದ ತಾಲೂಕಿನಲ್ಲಿಯೇ ಪ್ರಥಮವೆಂಬ ಯಶೋದಾ ಕೃಷ್ಣ ಸ್ಪರ್ಧಾ ಕಾರ್ಯಕ್ರಮ ನೆರೆದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿತು.

ವೈಷ್ಣವಿ ಮತ್ತು ಗಾಯತ್ರಿ ಶೇಟ್ ಪ್ರಥಮ ಸ್ಥಾನ, ಅತ್ರೇಯ ಮತ್ತು ದೀಪಾ ಯೋಗೇಶ್ ಕೋಡ್ಕಣಿ ದ್ವಿತೀಯ, ಚಿನ್ಮಯ್ ಮತ್ತು ಸ್ಮಿತಾ ನಾಗರಾಜ ನಾಯ್ಕ ತೃತೀಯ ಹಾಗೂ ಅವನಿ ಮತ್ತು ಸಂಜನಾ ಅಮರ ಶೆಟ್ಟಿ ಅವರು ಚತುರ್ಥ ಬಹುಮಾನಗಳಿಂದ ಪುರಸ್ಕೃತರಾದರು. ಬಹುಮಾನವು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಗಿಫ್ಟ್ ಹ್ಯಾಂಪರ್ ಒಳಗೊಂಡಿತ್ತು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹಾಂಗ್ಯೋ ಐಸ್ಕ್ರೀಮ್, ಆಭರಣ ಜ್ಯೂವೆಲ್ಲರ್ಸ್ ಹಾಗೂ ವಾತ್ಜಾತ್ ಫಾರ್ಮಾ ಫುಡ್ಸ್ ವಹಿಸಿದ್ದರು.

300x250 AD

ನಿವೃತ್ತ ಶಿಕ್ಷಕ, ಕಲಾವಿದ ಹರಿಶ್ಚಂದ್ರ ಗುನಗಾ, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷೆ ವಿದ್ಯಾ ಶೇಟ್ ಮತ್ತು ಸಾಹಿತಿ, ಕಲಾವಿದ ಮೋಹನ್ ನಾಯ್ಕ ಕೂಜಳ್ಳಿ ಅತ್ಯುತ್ತಮ ನಿರ್ಣಯ ನೀಡಿದ್ದಲ್ಲದೇ, ನಿರ್ಣಯದ ಮಾನದಂಡಗಳನ್ನು ಸಭೆಗೆ ಪ್ರಸ್ತುತ ಪಡಿಸಿದರು. ರೋಟರಿ ಅಧ್ಯಕ್ಷ ಎನ್.ಆರ್.ಗಜು, ಕಾರ್ಯದರ್ಶಿ ರಾಮದಾಸ ಗುನಗಿ, ಕೋಶಾಧ್ಯಕ್ಷ ಸಂದೀಪ ನಾಯಕ ಹಾಗೂ ಏನ್ಸ್ ಅಧ್ಯಕ್ಷೆ ವಿಜಯಲಕ್ಷ್ಮಿ ನಾಯ್ಕ, ಕಾರ್ಯದರ್ಶಿ ಶೈಲಾ ಗುನಗಿ, ಕೋಶಾಧ್ಯಕ್ಷೆ ಶ್ರದ್ಧಾ ನಾಯಕ, ರೋಟರಿಯ ಮಾಜಿ ಅಧ್ಯಕ್ಷರಾದ ಸುರೇಶ್ ಭಟ್, ಚೇತನ್ ಶೇಟ್ ಬಹುಮಾನ ವಿತರಿಸಿದರು. ಯೋಗೇಶ್ ಕೋಡ್ಕಣಿ ನಿರೂಪಿಸಿದರು. ರಾಮದಾಸ್ ಗುನಗಿ ವಂದಿಸಿದರು. ಸಂಸ್ಥೆಯ ಸದಸ್ಯರಾದ ದೀಪಾ ನಾಯಕ, ರಾಜೇಶ್ವರಿ ಹೆಗಡೆ, ಪವನ ಶೆಟ್ಟಿ ಸಹಕರಿಸಿದರು.

Share This
300x250 AD
300x250 AD
300x250 AD
Back to top