Slide
Slide
Slide
previous arrow
next arrow

ಸೆ.22ಕ್ಕೆ ಚಿಪಗಿಯಲ್ಲಿ ‘ಕೃಷ್ಣ ಸಂಧಾನ’ ತಾಳಮದ್ದಲೆ

300x250 AD

ಶಿರಸಿ: ಚಿಪಗಿ ಊರ ನಾಗರಿಕರ ಸಹಕಾರದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆಯವರಿಂದ ‘ರಜತಪರ್ವ ಸರಣಿ ತಾಳಮದ್ದಳೆ’ಯ ಭಾಗವಾಗಿ ‘ಕೃಷ್ಣ ಸಂಧಾನ’ ಪ್ರಸಂಗವನ್ನು ಚಿಪಗಿಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಸೆ.22, ಶುಕ್ರವಾರದಂದು ಆಯೋಜಿಸಲಾಗಿದೆ.

ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಗಜಾನನ ಭಾಗವತ ವಾನಳ್ಳಿ, ಶಂಕರ ಭಾಗವತ ಯಲ್ಲಾಪುರ, ಹಾಗೆಯೇ ಅರ್ಥಧಾರಿಗಳಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಉಜಿರೆ ಅಶೋಕ ಭಟ್, ವಿದ್ವಾನ್ ರಾಮಚಂದ್ರ ಭಟ್ಟ ಶಿರಳಗಿ ಆಗಮಿಸಲಿದ್ದಾರೆ.

300x250 AD

ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕುಮಾರ ತನ್ಮಯ ವಿನಾಯಕ ಹೆಗಡೆ, ಬಾಳಗಾರ್ ಇವರಿಂದ “ಯಕ್ಷನೃತ್ಯ” ಪ್ರದರ್ಶನ ನಡೆಯಲಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top