ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ವಾಲಿಬಾಲ್ ತಂಡದಲ್ಲಿ ಆಡಲು ಆಯ್ಕೆ ಆಗಿದ್ದಾರೆ.
ಹದಿನಾಲ್ಕು ವರ್ಷದೊಳಗಿನ ವಿಭಾಗದಲ್ಲಿ ಅಥರ್ವ ನಾಯಕ, ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಮೋಹಿತ್ ನಾಯಕ್, ಫಾರನ, ವೈಭವ್, ಜೀವನ್, ಶ್ರೀರಾಮ್, ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಳಗಾವಿ ವಿಭಾಗಮಟ್ಟದಿಂದ ಸ್ಪರ್ಧಿಸಲಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ಸೆ.22 ರಿಂದ ನಡೆಯಲಿದೆ.
ಭಟ್ಕಳದ ಶಿರಾಲಿಯಲ್ಲಿ ನಡೆದ ವಿಭಾಗದ ಮಟ್ಟದ ಸ್ಪರ್ಧೆಯಲ್ಲಿ ಮೋಹಿತ್ ನಾಯ್ಕ ತಂಡದ ನಾಯಕತ್ವದಲ್ಲಿ ವೈಭವ್, ಫರಾನ್, ರಾಘವೇಂದ್ರ, ಸ್ವಿಬರ್ಡ್, ಇಶಾಂತ್, ಮಲ್ಲಿಕಾರ್ಜುನ್, ತರುಣ್, ಚಂದ್ರ ಪಾಲ್, ಸಮಯ, ಗಣೇಶ್, ಜೀವನ್ ಪಾಲ್ಗೊಂಡಿದ್ದರು. ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಕೂಡ ಪಡೆದುಕೊಂಡಿದ್ದರು. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಉದಯ ಕೆ. ಶಿರಹಟ್ಟಿ , ಪ್ರಶಾಂತ ಗಾಂವ್ಕರ್ ಮತ್ತು ಯಮುನಾ ನಾಯಕ ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಉಪ ನಿರ್ದೇಶಕ ಪಿ. ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಸಿ ನಾಯ್ಕ, ಪ್ರಭಾರಿ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್ ತಾರಿಕೊಪ್ಪ, ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರು ಹಾಗೂ ಉಪ ಪ್ರಾಚಾರ್ಯ ಯಜ್ಞೇಶ್ವರ್ ಆರ್. ನಾಯ್ಕ, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.