• Slide
    Slide
    Slide
    previous arrow
    next arrow
  • ಸಾಧಕ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    300x250 AD

    ಶಿರಸಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಪ್ರತಿ ವರ್ಷ ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುತ್ತಿದ್ದು, ಈ ಬಾರಿಯೂ ಅಕ್ಟೋಬರ್ ಎರಡನೆ ವಾರದಲ್ಲಿ ನಡೆಸಲು 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 95% ಪ್ರತಿಶತಕ್ಕಿಂತ ಅಧಿಕ ಹಾಗೂ ಪಿ.ಯು.ಸಿ. ಯಲ್ಲಿ 90% ಪ್ರತಿಶತಕ್ಕಿಂತ ಅಧಿಕ ಸಾಧನೆ ತೋರಿದ ತಾಲೂಕಿನ ಸರ್ಕಾರಿ ನೌಕರರ ಮಕ್ಕಳನ್ನು ಪುರಸ್ಕರಿಸಲಾಗುವುದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ತೋರಿದ ತಾಲೂಕಿನ ನೌಕರರು ಹಾಗೂ ಅವರ ಮಕ್ಕಳನ್ನು ಪುರಸ್ಕರಿಸಲಾಗುವುದು.

    ಅರ್ಹರು ಅರ್ಜಿಯೊಂದಿಗೆ ದೃಢಿಕೃತ ಅಂಕಪಟ್ಟಿ ಮತ್ತು ಇತ್ತೀಚಿನ ಪಾಸಪೋರ್ಟ ಸೈಜ್ ಪೋಟೋವನ್ನು ಸಂಘಕ್ಕೆ ಇಲ್ಲವೇ ತಮ್ಮ ಇಲಾಖೆಯಿಂದ ಆಯ್ಕೆಗೊಂಡ ಸಂಘದ ಪ್ರತಿನಿಧಿಗಳಿಗೆ ಅ.5ರ ಒಳಗೆ ಸಲ್ಲಿಸಲು ಕೋರಿದೆ. ವಿಶೇಷ ಸಾಧನೆ ತೋರಿ ಪುರಸ್ಕಾರಕ್ಕೆ ಆಯ್ಕೆಯಾದ ನೌಕರರಿಗೆ ಹಾಗೂ ಮಕ್ಕಳಿಗೆ ಫೋನ್ ಮೂಲಕ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಿರಣಕುಮಾರ್ ಹೆಚ್.ನಾಯ್ಕ ಅಧ್ಯಕ್ಷರು ಮೊ:Tel:+919449801404 ಮತ್ತು ವಸಂತ ನಾಯ್ಕ ಕಾರ್ಯದರ್ಶಿ ಮೊ:Tel:+919448206361 ರನ್ನು ಸಂಪರ್ಕಿಸಲು ಕೋರಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top