ಸಿದ್ದಾಪುರ: ಬೆಂಗಳೂರಿನ ಶ್ರೀ ಅಖಿಲ ಹವ್ಯಕ ಮಹಾಮಂಡಳದಿಂದ ನೆಲೆಮಾಂವು ಶ್ರೀಗುರುಪೀಠಕ್ಕೆ ಭೇಟಿ ನೀಡಿ, ಶ್ರೀಗಳ ಪಾದಪೂಜೆ ಹಾಗೂ ಆಶೀರ್ವಚನ ಪಡೆಯುವ ಕಾರ‍್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಭೇಟಿ ನೀಡಿ ಹವ್ಯಕ ಮಹಾಮಂಡಳದ ಚಟುವಟಿಕೆಗಳನ್ನು ವಿವರಿಸಿ, ಮಹಾಸಭೆಯು ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಅನೇಕ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಶ್ರೀ ಗುರು ಪೀಠದ ಶ್ರೀ ಮಾಧವಾನಂದ ಶ್ರೀಗಳು ಆಶೀರ್ವಚನ ನೀಡಿ ಸಮಾಜದ ಉತ್ತಮ ಕಾರ್ಯಗಳಿಗೆ ಶ್ರೀ ದೇವರ ಹಾಗೂ ಸಂಸ್ಥಾನದ ಆಶೀರ್ವಾದವಿದೆ ಎಂದರು. ಈ ಸಂದರ್ಭದಲ್ಲಿ ಜಿ.ಜಿ. ಹೆಗಡೆ ಬಾಳಗೋಡ ರಚಿಸಿದ ಸಿದ್ದಾಪುರ ತಾಲೂಕು ದರ್ಶನ ಸ್ವಾತಂತ್ರ್ಯ ಹೋರಾಟದ ಕಥನ ಗ್ರಂಥವನ್ನು ನೀಡಿ ಶ್ರೀ ಮಠದ 26 ಗ್ರಾಮಗಳಲ್ಲಿನ ಅನೇಕ ಸದ್‌ಭಕ್ತರು ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿ ಸ್ಮರಣಾರ್ಹವಾದ ಚರಿತ್ರೆ ಇದೆ. ಮಹಿಳಾ ಸತ್ಯಾಗ್ರಹ ಸಹ ಶ್ರೀ ಮಠದ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವಿವರಿಸಿದರು.
ಶ್ರೀ ಅಖಿಲ ಹವ್ಯಕ ಮಹಾಸಭಾದ ಪ್ರಧಾನ ಕಾರ್ಯದರ್ಶಿ ವೇಣು.ಸಂಪ. ಕಾರ್ಯದರ್ಶಿ ಪ್ರಶಾಂತ ಮಲವಳ್ಳಿ, ನಿರ್ದೇಶಕರುಗಳಾದ ಆರ್.ಜಿ.ಹೆಗಡೆ ಹೊಸಾರ್ಕಳಿ ಹಾಗೂ ಶ್ರೀ ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಜಿ.ಎಂ. ಭಟ್ಟ ಕಾಜಿನಮನೆ ಅಖಿಲ ಹವ್ಯಕ ಮಹಾಸಭಾ ನಿರ್ದೇಶಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.