Slide
Slide
Slide
previous arrow
next arrow

ಕರ್ತವ್ಯಕ್ಕೆ ಹಾಜರಾದ ಅಮಾನತ್ತಾಗಿದ್ದ ಪಿಡಿಒ – ಹೈಕೋರ್ಟ್ ಆದೇಶಕ್ಕೆ ಹೈಕೋರ್ಟ್ ಪೀಠದಿಂದಲೇ ತಡೆಯಾಜ್ಞೆ!!

300x250 AD

ಕುಮಟಾ: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪದ ಮೇರೆಗೆ ಅಮಾನತುಗೊಂಡ ಬಾಡ ಗ್ರಾ.ಪಂ ಪಿಡಿಓ ಕಮಲಾ ಹರಿಕಂತ್ರ ಅವರ ಅಮಾನತಿಗೆ ಹೈಕೋರ್ಟ್ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯದ ಆದೇಶದಂತೆ ಕಮಲಾ ಅವರನ್ನು ಕರ್ತವ್ಯಕ್ಕೆ ಮರು ನಿಯೋಜನೆಗೆ ಅನುಮತಿ ನೀಡಿದೆ.

300x250 AD

ಕಂಪ್ಯೂಟರ್ ಡಾಟಾ ಆಪರೇಟರ್ ನೇಮಕ ಪ್ರಕರಣಕ್ಕೆ ಸಂಬAಧಿಸಿ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಕಾರಣಕ್ಕೆ ಜಿ.ಪಂ ಸಿಇಒ ಈಶ್ವರ ಕಾಂದೂ ಅವರು ಪಿಡಿಓ ಕಮಲಾ ಹರಿಕಂತ್ರ ಅವರನ್ನು ಆ.೧೧ರಂದು ಅಮಾನತುಗೊಳಿಸಿದ್ದರು. ಈ ಅಮಾನತನ್ನು ಪ್ರಶ್ನಿಸಿ ಅವರು ಧಾರವಾಡ ಹೈಕೋರ್ಟ್ ಮೊರೆಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಅಮಾನತಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಕಮಲಾ ಹರಿಕಂತ್ರ ಅವರನ್ನು ಮರು ನಿಯೋಜನೆ ಮಾಡಿಕೊಳ್ಳುವಂತೆ ಸೂಚಿಸಿದೆ. ಸದ್ಯ ಬಾಡ ಗ್ರಾ.ಪಂ ನಲ್ಲಿ ವೆಂಕಟ್ರಮಣ ಪಟಗಾರ ಅವರು ಕಾರ್ಯನಿರ್ವಹಿಸುತ್ತಿದ್ದು, ಅವರ ಜಾಗಕ್ಕೆ ಕಮಲಾ ಅವರು ಶನಿವಾರವೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Share This
300x250 AD
300x250 AD
300x250 AD
Back to top