Slide
Slide
Slide
previous arrow
next arrow

ನಾಪತ್ತೆಯಾಗಿದ್ದ ಬಾಲಕ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆ

300x250 AD

ದಾಂಡೇಲಿ : ನಗರದ ಗಾಂಧಿನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಮನೆಯ ಮೇಲ್ಗಡೆಯಲ್ಲಿರುವ ನೀರಿನ ಟ್ಯಾಂಕಿನಲ್ಲಿ ನಾಪತ್ತೆಯಾಗಿದ್ದ ಬಾಲಕನೋರ್ವನ ಮೃತದೇಹ ಪತ್ತೆಯಾದ ಘಟನೆ ಗುರುವಾರ ರಾತ್ರಿ ನಡೆದಿದೆ.

ಗಾಂಧಿನಗರದ ಕಂಜಾರ್‌ಬಾಟ್ ನಿವಾಸಿ ಸುನೀಲ್ ಕಂಜಾರಬಾಟ್ ಎಂಬವರ 6 ವರ್ಷ ವಯಸ್ಸಿನ ಮಗನಾದ ಯಶ್ ಸುನೀಲ್ ಕಂಜಾರಬಾಟ್ ಎಂಬವನೇ ಮೃತಪಟ್ಟ ಪುಟಾಣಿ ಬಾಲಕನಾಗಿದ್ದಾನೆ. ಗುರುವಾರ ಸಂಜೆ ಡಿಜೆ ಸೌಂಡ್ ಬರುತ್ತಿರುವುದನ್ನು ನೋಡಲೆಂದು ಹೋದವನು ನಾಪತ್ತೆಯಾಗಿದ್ದನು. ಎಷ್ಟೇ ಹುಡುಕಾಡಿದರೂ ಸಿಗದಿದ್ದಾಗ, ಸ್ಥಳೀಯ ನಗರ ಸಭಾ ಸದಸ್ಯೆ ರುಕ್ಮಿಣಿ ಬಾಗಾಡೆಯವರು ಅಲ್ಲೆ ಹತ್ತಿರದಲ್ಲಿ ನಿರ್ಮಾಣದ ಹಂತದಲ್ಲಿರುವ ಮನೆಯ ಮಾಲಕರಾದ ರಾಜು ಕಾಂಬಳೆಯವರನ್ನು ಸ್ಥಳಕ್ಕೆ ಕರೆಸಿ ಮನೆಯ ಮೇಲ್ಗಡೆಯಿರುವ ನೀರಿನ ಟ್ಯಾಂಕನ್ನು ಪರಿಶೀಲನೆ ಮಾಡಿದ್ದಾರೆ. ನೀರಿನ ಟ್ಯಾಂಕಿನ ಮೇಲ್ಗಡೆ ಪ್ಲೈವುಡ್ ಮುಚ್ಚಿದ್ದು ಇದ್ದು, ಅದನ್ನು ತೆಗೆದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಅವರು ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದು, ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆಯಿಂದ ನಿಜಾಂಶ ಬೆಳಕಿಗೆ ಬರಬೇಕಾಗಿದೆ.

ಪುಟಾಣಿ ಬಾಲಕ ಆಕಸ್ಮಿಕವಾಗಿ ನೀರಿನ ಟ್ಯಾಂಕಿಗೆ ಬಿದ್ದಿದ್ದಲ್ಲಿ, ನೀರಿನ ಟ್ಯಾಂಕಿನ ಮೇಲ್ಗಡೆ ಮುಚ್ಚಲಾಗಿದ್ದ ಪ್ಲೈವುಡ್ ಶೀಟ್ ಮುಚ್ಚಿಯೆ ಇರುವುದರಿಂದ ಈ ಸಾವಿನ ಬಗ್ಗೆ ಹಲವು ಅನುಮಾನ ಮೂಡತೊಡಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಮರಣೋತ್ತರ ಪರೀಕ್ಷೆ ನಡೆಸಿ, ತಡರಾತ್ರಿಯೆ ಸ್ವಗೃಹಕ್ಕೆ ತೆಗೆದುಕೊಂಡು ಹೋಗಲಾಗಿತ್ತು. 

ಸಾವಿನ ಬಗ್ಗೆ ಅನುಮಾನ,ಪ್ರತಿಭಟನೆ:

300x250 AD

ನಿರ್ಮಾಣದ ಹಂತದಲ್ಲಿರುವ ಮನೆಯ ಮೇಲ್ಗಡೆಯಿರುವ ನೀರಿನ ಟ್ಯಾಂಕಿನಲ್ಲಿ ಮೃತಪಟ್ಟ ಬಾಲಕನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯತೊಡಗಿದ್ದು, ಸ್ಥಳದಲ್ಲಿ ಪ್ರತಿಭಟನೆ, ಆಕ್ರೋಶ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಶುಕ್ರವಾರ ಬೆಳಿಗ್ಗೆಯಿಂದ ನಡೆದಿದೆ.

ಗುರುವಾರ ತಡರಾತ್ರಿಯೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮನೆಗೆ ತರಲಾಗಿದ್ದರೂ, ಅಂತ್ಯ ಸಂಸ್ಕಾರ ಮಾತ್ರ ನಡೆಸಿರಲಿಲ್ಲ. ಈ ಸಾವಿನ ಬಗ್ಗೆ ತನಿಖೆಯಾಗಬೇಕು, ಬಾಲಕ ಮೃತಪಟ್ಟಿದ್ದ ನಿರ್ಮಾಣ ಹಂತದಲ್ಲಿರುವ ಮನೆಗೆ ಬಾಗಿಲು ಹಾಕಿರುತ್ತಿದ್ದಲ್ಲಿ ಇಲ್ಲವೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿರುತ್ತಿದ್ದಲ್ಲಿ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಪುಟ್ಟ ಬಾಲಕನ ಸಾವಿನ ಕುರಿತಾಗಿ ತನಿಖೆಯಾಗಬೇಕು, ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಕುಟುಂಬಸ್ಥರ ಜೊತೆ ಸ್ಥಳೀಯರು ಸೇರಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಸ್ಥಳಕ್ಕೆ ಪಿಎಸ್‌ಐ ಐ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಹಾಗೂ ಮಹಜರು ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತನಾಡಿ, ನಿರ್ಮಾಣ ಹಂತದಲ್ಲಿರುವ ಮನೆಗೆ ಸಂಬಂಧಿಸಿದಂತೆ ತನಿಖೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ವರದಿ ನೀಡುವುದಾಗಿಯೂ ಮತ್ತು ಸಂಬಂಧಿಸಿದ ದಾಖಲಾತಿಗಳನ್ನು ನೀಡುವುದಾಗಿ ತಿಳಿಸಿದರು. ಅಂತಿಮವಾಗಿ ಶುಕ್ರವಾರ ಸಂಜೆ ಮೃತ ಬಾಲಕನ ಅಂತ್ಯ ಸಂಸ್ಕಾರವನ್ನು ಗಾಂಧಿನಗರದ ಕಂಜಾರಬಾಟ್ ಸಮುದಾಯದ ಸ್ಮಶಾನಭೂಮಿಯಲ್ಲಿ ನೆರವೇರಿಸಲಾಯಿತು.

Share This
300x250 AD
300x250 AD
300x250 AD
Back to top