Slide
Slide
Slide
previous arrow
next arrow

ವರಮಹಾಲಕ್ಷ್ಮಿ ದೇವಿಗೆ ಹಾಕಿದ್ದ ಚಿನ್ನದ ಸರ ಕಳುವು

300x250 AD

ಅಂಕೋಲಾ: ವರ ಮಹಾಲಕ್ಷ್ಮಿಯ ಪೂಜೆಗೆಂದು ಕಳಸದಲ್ಲಿ ದೇವಿಯ ಪಂಚಲೋಹದ ಮುಖಕ್ಕೆ ಹಾಕಿದ್ದ 27 ಗ್ರಾಂನ 1 ಲಕ್ಷ 20 ಸಾವಿರ ಮೌಲ್ಯದ ಬಂಗಾರದ ಹಾರವನ್ನು, ಪೂಜೆಗೆ ಬಂದ ಆಪ್ತರೊಬ್ಬರೇ ಸಿನಿಮೀಯ ರೀತಿಯಲ್ಲಿ ಕಳವು ಮಾಡಿಕೊಂಡ ಹೋದ ಘಟನೆ ಪಟ್ಟಣದ ಕೇಣಿಯಲ್ಲಿ ನಡೆದಿದೆ.

ಸೆಪ್ಟಂಬರ್ 8 ರ ಶುಕ್ರವಾರದಂದು ಕೇಣಿಯ ಸಾರಿಗೆ ಇಲಾಖೆಯಲ್ಲಿ ಮೆಕ್ಯಾನಿಕ್ ಇಂಜಿನಿಯರ್ ಆಗಿರುವ ದೀಪಕ ಸುಭಾಷ ನಾಯ್ಕ ಮನೆಯಲ್ಲಿ ವರಮಹಾಲಕ್ಷ್ಮಿಯ ಪೂಜೆಯನ್ನ ವಿಜೃಂಬಣೆಯಿಂದ ಕೈಗೊಂಡಿದ್ದರು. ನೂರಾರು ಆಪ್ತೇಷ್ಠರು, ಭಕ್ತರು ಆಗಮಿಸಿ ವರ ಮಹಾಲಕ್ಷ್ಮಿಯ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ತೆರಳಿದ್ದರು.

300x250 AD

ಸಂಜೆ ಸುಮಾರು 6-20 ಸುಮಾರಿಗೆ ದೇವಿಯ ಪಂಚಲೋಹದ ಮುಖಕ್ಕೆ ಹಾಕಿದ್ದ ಬಂಗಾರದ ಸರ ಇಲ್ಲದೆ ಇರುವದನ್ನು ಗಮನಿಸಿದ್ದಾರೆ. ಆದರೆ ಕಳ್ಳ ತನ್ನ ಚಾಣಾಕ್ಷತನದಿಂದ, ದೇವಿಗೆ ಮುಟ್ಟಿ ಆರ್ಶಿವಾದ ಪಡೆಯುವ ನಾಟಕವಾಡಿ ಚಿನ್ನದ ಹಾರವನ್ನು ಕಟ್ ಮಾಡಿ ಚಿನ್ನದ ಸರ್ ಎಗರಿಸಿ ಕಳ್ಳತನ ಎಸಗಿರುವುದು ತಿಳಿದುಬಂದಿದೆ. ದೇವಿಯ ಲೋಹದ ಮೂರ್ತಿಯ ಹಿಂಬದಿಯಲ್ಲಿ ಬಂಗಾರದ ತುಂಡು ಚೈನ್ ದೇವಿಯ ಬಳಿ ದೊರೆತಿದೆ. ಈ ಘಟನೆಯಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗುವಂತೆ ಮಾಡಿದ್ದು, ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸೈ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Share This
300x250 AD
300x250 AD
300x250 AD
Back to top