• Slide
    Slide
    Slide
    previous arrow
    next arrow
  • ಹೆದ್ದಾರಿ ಅಪಘಾತ ತಡೆಗೆ ಚಿಂತನೆ: ಶಾಸಕ ಸೈಲ್

    300x250 AD

    ಕಾರವಾರ: ನಗರದ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವಾಗ ಅಪಘಾತಗಳು ಹೆಚ್ಚಾಗಿದೆ. ಇದನ್ನ ತಡೆಯಲು ಸದಾಶಿವಗಡದಿಂದ ಕಾರವಾರ ನಗರಕ್ಕೆ ಓಡಾಡಲು ಮತ್ತೊಂದು ಸೇತುವೆ ಮಾಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.

    ನಗರದ ಶಾಸಕರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹೆದ್ದಾರಿಯಲ್ಲಿ ದಿನೇ ದಿನೇ ಅಪಘಾತ ಹೆಚ್ಚಾಗುತ್ತಿದೆ. ಸದಾಶಿವಗಡದಿಂದ ಕಾರವಾರ ಭಾಗಕ್ಕೆ ಸಾಕಷ್ಟು ಜನ ಓಡಾಡುತ್ತಾರೆ. ಪ್ರತಿಯೊಬ್ಬರು ಹೆದ್ದಾರಿಯಲ್ಲಿಯೇ ಸಂಚರಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಇದನ್ನ ತಪ್ಪಿಸಲು ಮತ್ತೊಂದು ಸೇತುವೆ ಮಾಡಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ. ಈ ಹಿಂದೆ ಕಾರವಾರದಲ್ಲಿ ಬಾರ್ಜ್ ಮೂಲಕ ಅರಣ್ಯ ವಸತಿ ಗೃಹದ ಬಳಿಯಿಂದ ಸದಾಶಿವಗಡಕ್ಕೆ ಓಡಾಡುತ್ತಿದ್ದರು. ಈ ಜಾಗದಿಂದಲೇ ಸೇತುವೆ ನಿರ್ಮಿಸಿದರೆ ಸ್ಥಳೀಯರು ಓಡಾಡಲು ಸಹಾಯವಾಗಲಿದೆ. ಸಾಕಷ್ಟು ಜನ ಸದಾಶಿವಗಡಕ್ಕೆ ಇದೇ ಮಾರ್ಗದಲ್ಲಿ ಓಡಾಡಲಿದ್ದು ಹೆದ್ದಾರಿಯಲ್ಲಿ ಹೋಗುವುದು ತಪ್ಪುತ್ತದೆ ಎಂದರು.

    ಹೆದ್ದಾರಿಯಲ್ಲಿ ನಿರ್ಮಿಸಿರುವ ಟನಲ್ ಪ್ರಾರಂಭಿಸಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ನಾವು ಜನರ ಜೀವದ ಜೊತೆ ಆಟ ಆಡುವುದಿಲ್ಲ. ಟನಲ್ ಪ್ರಾರಂಭಿಸಿದ ನಂತರ ಅದು ಸೋರುತ್ತಿದೆ. ಫಿಟ್ ನೆಸ್ ಇಲ್ಲ ಎಂದು ಕೆಲವರು ಆರೋಪಿಸಿದ್ದರಿಂದಲೇ ನಾವು ಬಂದ್ ಮಾಡಿದ್ದೇವೆ. ಐ.ಆರ್.ಬಿ ಕಂಪನಿಯವರು ಯಾವುದೋ ಕಂಪನಿಯ ಫಿಟ್ ನೆಸ್ ಸರ್ಟಿಫಿಕೇಟನ್ನ ಹಿಡಿದು ಪ್ರಾರಂಭಿಸಲು ಬಂದಿದ್ದಾರೆ. ಆದರೆ ನಾವು ಅಧಿಕೃತ ಇರುವ ಯಾವುದಾರು ದೊಡ್ಡ ಸಂಸ್ಥೆ ಮೂಲಕವೇ ಫಿಟ್ ನೆಸ್ ಪರೀಕ್ಷಿಸಿ ಸರ್ಟಿಫಿಕೇಟ್ ಕೊಟ್ಟ ನಂತರವೇ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದೇವೆ. ಇದನ್ನ ನಮ್ಮ ಮೇಲೆ ಆರೋಪ ಮಾಡುವವರು ಅರಿಯಬೇಕು. ಇದಲ್ಲದೇ  ಕಾರವಾರ ನಗರದಿಂದ ಮಾಜಾಳಿ ಗಡಿಯ ವರೆಗೆ ಹೆದ್ದಾರಿಯಲ್ಲಿ ಲೈಟ್ ಹಾಕುಲು ಐ.ಆರ್.ಬಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ.

    300x250 AD

    ತಾಲೂಕಿನ ಸದಾಶಿವಗಡದಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಕ್ರಿಡಾಂಗಣ ಮಾಡುವ ಬಗ್ಗೆ ಸಹ ಪ್ರಯತ್ನ ಮುಂದುವರೆಸಲಾಗಿದೆ. ಈಗಾಗಲೇ ಕ್ರೀಡಾಂಗಣ ಮಾಡುವ ಜಾಗದಲ್ಲಿ ಒಂದು ಸರ್ವೆ ಮಾಡಿಸಲಾಗಿದೆ. ಡ್ರೋನ್ ಸರ್ವೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯರಿಗೆ ಕ್ರೀಡಾಂಗಣ ನಿರ್ಮಾಣದಿಂದ ತಮ್ಮ ಜಾಗ ಒತ್ತುವರಿ ಆಗುತ್ತದೆ ಎನ್ನುವ ಭಯವಿದೆ. ಯಾವುದೇ ಕಾರಣಕ್ಕೂ ಸ್ಥಳೀಯರ ಜಾಗ ಒತ್ತುವರಿ ಮಾಡಿಕೊಳ್ಳುವುದಿಲ್ಲ. ಈಗಾಗಲೇ ಕರ್ನಾಟಕ ಕ್ರಿಕೇಟ್ ಅಕಾಡೆಮಿ ಹೆಸರಿಗೆ ಜಾಗವನ್ನ ಹಸ್ತಾಂತರ ಮಾಡಲಾಗಿದೆ. ಹಸ್ತಾಂತರ ಕಾರ್ಯಕ್ರಮ ಮಾಡಲಾಗುವುದು. ಸೈಯದ್ ಕಿರ್ಮಾನಿ ಅವರು ಬರುವ ಸಾಧ್ಯತೆ ಇದೆ. ಕ್ರೀಡಾಂಗಣ ನಿರ್ಮಾಣದಿಂದ ಕಾರವಾರದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದಲ್ಲದೇ ಕಾರವಾರದಲ್ಲಿ ಮಕ್ಕಳಿಗೆ ಸ್ಕೇಟಿಂಗ್ ಆಡಲು ಕ್ರೀಡಾಗಂಣ ಕಡಲ ತೀರದಲ್ಲಿ ಮಾಡಲು ಪ್ರಯತ್ನಿಸಲಾಗಿದ್ದು ನಗರಸಭೆ ಅಧಿಕಾರಿಗಳ ಜೊತೆ ಸಹ ಮಾತನಾಡಿದ್ದೇನೆ. ನಗರೋಥ್ಥಾನದ ನಿಧಿಯಡಿ 34 ಕೋಟಿ ಬಂದಿದ್ದು ಈ ನಿಧಿಯಲ್ಲಿ ಸ್ಕೇಟಿಂಗ್ ಆಡಲು ಕ್ರೀಡಾಂಗಣ ಮಾಡಲಿದ್ದೇವೆ ಎಂದಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top