Slide
Slide
Slide
previous arrow
next arrow

ಕ್ರೀಡಾಕೂಟ: ಹೆಗ್ಗರಣಿ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

300x250 AD

ಸಿದ್ದಾಪುರ: ಪಟ್ಟಣದ ಮಹಾತ್ಮಾ ಗಾಂಧಿ ಮೈದಾನದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಹೆಗ್ಗರಣಿಯ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ‌.

ಶ್ರೀವರ್ಚಸ್ವಿ ಭಟ್ ಯೋಗಾಸನದಲ್ಲಿ ದ್ವಿತೀಯ, ಸಂಕೇತ್ ಭಟ್ ಚೆಸ್ ನಲ್ಲಿ ಚತುರ್ಥ, ರಕ್ಷಿತಾ ಗೌಡ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಸೇರಿದಂತೆ, ಗುಂಪು ಆಟಗಳಲ್ಲಿ ಹೆಣ್ಣು ಮಕ್ಕಳ ಖೋ ಖೋ ಹಾಗೂ ಕಬಡ್ಡಿ ತಂಡವು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

300x250 AD

ಹಾಗೆಯೇ ನಾಗಶ್ರೀ ಗೌಡ ಹರ್ಡಲ್ಸ್ ನಲ್ಲಿ ತೃತೀಯ, ಹಾಗೂ ಗಂಡು ಮಕ್ಕಳು ಶೆಟಲ್ ಬ್ಯಾಡ್ಮಿಂಟನ್’ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಶಿಕ್ಷಕ, ಶಿಕ್ಷಕೇತರ ವೃಂದ ಹಾಗೂ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top