Slide
Slide
Slide
previous arrow
next arrow

ಕಸ ಎಸೆಯಬೇಡಿ ಎಂದಿದ್ದಕ್ಕೆ ಪೌರಕಾರ್ಮಿಕರ ಮೇಲೆ ಹಲ್ಲೆ

300x250 AD

ಕಾರವಾರ: ರಸ್ತೆ ಮೇಲೆ ಕಸ ಎಸೆಯುತ್ತಿದ್ದವರಿಗೆ ಕಸ ಎಸೆಯದಂತೆ ಹೇಳಿದಕ್ಕೆ ಇಬ್ಬರು ಪೌರ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ.

ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಜಾಗದಲ್ಲಿ ಪ್ರತಿನಿತ್ಯ ಹಲವರು ಕಸವನ್ನ ಎಸೆಯುತ್ತಾರೆ. ಪ್ರತಿದಿನ ಬೆಳಿಗ್ಗೆ ಕಸ ಸಂಗ್ರಹಿಸುವ ವಾಹನ ಬಂದರು ಅದಕ್ಕೆ ನೀಡದೆ ರಾತ್ರಿಯಾಗುತ್ತಿದ್ದಂತೆ ರಸ್ತೆ ಮೇಲೆ ಕಸ ಎಸೆದು ಹೋಗುತ್ತಾರೆ. ಈ ಬಗ್ಗೆ ಹಲವು ಬಾರಿ ನಗರಸಭೆಗೆ ಕೆಲವರು ದೂರು ನೀಡಿದ್ದು ನಗರಸಭೆ ಅಧಿಕಾರಿಗಳು ಕಸ ಎಸೆಯದಂತೆ ಮನವಿ ಮಾಡಿಕೊಂಡಿದ್ದರು ಇನ್ನು ಹಲವರು ಕಸ ಎಸೆಯುವುದನ್ನ ಬಿಟ್ಟಿಲ್ಲ. ಸೋಮವಾರ ರಾತ್ರಿ ವೇಳೆ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಚೇತನಕುಮಾರ ವಿ ಕೊರಾರ್ ಎಂಬಾತ ಸ್ವಚ್ಛತಾ ಕೆಲಸದ ಪಾಳಿ ಮುಗಿಸಿ ಮನೆಗೆ ತೆರಳುವಾಗ ನಗರದ ಬಸ್ ನಿಲ್ದಾಣದ ಬಳಿ ನಿತಿನ್ ಹರಿಕಂತ್ರ ಎಂಬುವವನು ಕಸ ಬಿಸಾಡುತ್ತಿದ್ದದ್ದನ್ನ ಗಮನಿಸಿದ್ದಾನೆ.

ಕಸ ಎಸೆಯುವುದನ್ನ ಗಮನಿಸಿದ ಪೌರ ಕಾರ್ಮಿಕ ಚೇತನಕುಮಾರ್ ಈಗಷ್ಟೇ ಸ್ವಚ್ಛತೆ ಮಾಡಿದ್ದು ಪುನಃ ಇಲ್ಲಿ ಕಸ ಬಿಸಾಡದಂತೆ ತಿಳಿಸಿದ್ದಾನೆ. ಇನ್ನು ಪೌರ ಕಾರ್ಮಿಕ ಮನವಿ ಮಾಡಿಕೊಂಡರು ಬಗ್ಗದ ನಿತೀನ್ ಹರಿಕಂತ್ರ ಹಾಗೂ ನಿತೇಶ ಹರಿಕಂತ್ರ ಕಸ ಎಸೆಯಲು ಮುಂದಾದಾಗ ಪೌರ ಕಾರ್ಮಿಕ ಚೇತನಕುಮಾರ್ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾನೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಸಹೋದರರಾದ ನಿತೀನ್ ಹಾಗೂ ನಿತೇಶ್ ಪೌರ ಕಾರ್ಮಿಕ ಚೇತನಕುಮಾರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾನು ಇಲ್ಲಿಯೇ ಕಸ ಬಿಸಾಡುತ್ತೇನೆ, ನನಗೆ ಹೇಳುವವನು ನೀನು ಯಾರು? ಕಸ ಆರಿಸುವವ ನೀನು. ನಿನ್ನ ಹಾಗೂ ನಿನ್ನ ಜಾತಿಯ ಕೆಲಸ ನಾವು ಬಿಸಾಡಿದ ಕಸ ಆರಿಸುವುದು, ಈ ಕಸ ತೆಗೆದುಕೊಂಡು ಹೋಗು ಎಂದು ಹೇಳಿದ್ದಾರೆ ಎಂದು ದೂರಲಾಗಿದೆ.

300x250 AD

ಇದಲ್ಲದೇ ಚೇತನಕುಮಾರನ ಮೇಲೆ ಮನಬಂದ0ತೆ ಮಾರಣಾಂತಿಕ ಹಲ್ಲೆಯನ್ನ ಮಾಡಿದ್ದು, ನಂತರ ಮರದ ಟೊಂಗೆಯೊ0ದನ್ನ ತೆಗೆದುಕೊಂಡು ನಿತೀನ್ ಹಾಗೂ ನಿತೇಶ್ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಚೇತನಕುಮಾರ ಹೆದರಿ ದೂರ ಹೋದರು ಬಿಡದೆ ಹಿಂದಿನಿ0ದ ಬಂದು ಹಲ್ಲೆ ಮಾಡಿದ್ದಲ್ಲದೇ ಬಿಡಿಸಲು ಬಂದ ಕಚೇರಿ ಮತ್ತೋರ್ವ ಪೌರ ಕಾರ್ಮಿಕ ಪುರುಷೋತ್ತಮ ಕೊರಗನ ಮೇಲೆ ಮಾರಣಾಂತಿಕವಾಗಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇನ್ನು ಹಲ್ಲೆ ಮಾಡಿರುವ ಸಂಪೂರ್ಣ ದೃಶ್ಯಗಳು ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರ ಮೇಲೆ ಕಸ ಎಸೆಯದಂತೆ ತಿಳಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವುದಕ್ಕೆ ನಗರಸಭೆಯ ಸಿಬ್ಬಂದಿಗಳು ಸಾರ್ವಜನಿಕರು ಕಿಡಿಕಾರಿದ್ದಾರೆ.

Share This
300x250 AD
300x250 AD
300x250 AD
Back to top