• Slide
    Slide
    Slide
    previous arrow
    next arrow
  • ಅಂಕೋಲಾ ಬಸ್ ನಿಲ್ದಾಣಕ್ಕೆ ಸ್ವಚ್ಚತೆಯಲ್ಲಿ ಮೊದಲ ಸ್ಥಾನ

    300x250 AD

    ಅಂಕೋಲಾ: ಜಿಲ್ಲೆಯಲ್ಲಿರುವ 14 ಬಸ್ ನಿಲ್ದಾಣಗಳ ಪೈಕಿ ಅಂಕೋಲಾ ಬಸ್ ನಿಲ್ದಾಣ ಅತ್ಯಂತ ಸ್ವಚ್ಚ ನಿಲ್ದಾಣವಾಗಿದ್ದು, ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ವಚ್ಛತಾ ಅಭಿಯಾನದಿಂದ ಪ್ರೇರಣೆಗೊಂಡು, ಹಾಲಿ ಪ್ರಧಾನಿಗಳ ಮುತುವರ್ಜಿಯಿಂದ ಇಮ್ಮಡಿಗೊಂಡು ಈಗ ರಾಷ್ಟ್ರವ್ಯಾಪಿಯಾಗಿ ಗಮನ ಸೆಳೆದಿರುವ ಈ ಅಭಿಯಾನವು ಇಂದು ಸಕಲ ಸರಕಾರಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ.

    ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಎಸ್.ಅರ್.ಟಿ.ಸಿ. ಸಹಾಯಕ ಸಂಚಾರಿ ಅಧೀಕ್ಷಕ ಶಿವಾನಂದ ನಾಯ್ಕ, ವಾ.ಕ.ರ.ಸಾ.ಸಂಸ್ಥೆಯ ವತಿಯಿಂದ ವಿಭಾಗ ಮಟ್ಟದಲ್ಲಿ ಒಂದು ತಿಂಗಳ ಅವಧಿಯ ಅಂತರದಲ್ಲಿ ವಿವಿಧ ಮಾನದಂಡಗಳಾದ ಸ್ವಚ್ಚತೆ, ಸಿಬ್ಬಂದಿಗಳ ಶಿಸ್ತು, ಸಮಯ ಪ್ರಜ್ಞೆ ಹಾಗೂ ಇತರ ಮಾನದಂಡಗಳನ್ನು ಇಟ್ಟುಕೊಂಡು ಜಿಲ್ಲೆಯ ಎಲ್ಲಾ ತಾಲೂಕುಗಳ ಎಲ್ಲ 14 ಬಸ್ ನಿಲ್ದಾಣಗಳ ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸಿ ತೀರ್ಮಾನಿಸಲಾಗುತ್ತದೆ. ಹೀಗೆ ಮೌಲ್ಯಮಾಪನ ಮಾಡಿದಾಗ ನಮ್ಮ ನಿಲ್ದಾಣಕ್ಕೆ ಅತೀ ಹೆಚ್ಚಿನ ಅಂಕ ದೊರೆತಿದ್ದು ಸಂತೋಷ ತಂದಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಶೀಲ್ದಾರ್ ಅಶೋಕ ಭಟ್ ಮಾತನಾಡಿ, ಸ್ವಚ್ಚತೆಯಿಂದ ಸ್ವಾಸ್ಥ್ಯ ದೊರೆಯುತ್ತದೆ. ಅಲ್ಲಿ ಇಲ್ಲಿ ಉಗುಳುವುದು, ಶೌಚಾಲಯಗಳ ಅಸಮರ್ಪಕ ಬಳಕೆ ಹಾಗೂ ನಿರ್ವಹಣೆ ಮೊದಲಾದವುಗಳಿಂದ ರೋಗ ರುಜಿನಗಳು ಹರಡುತ್ತವೆ. ಅಂಕೊಲಾದ. ಬಸ್ ನಿಲ್ದಾಣ ಇವೆಲ್ಲವುಗಳಿಂದ ಮುಕ್ತವಾಗಿರುವುದರಿಂದಾಗಿಯೆ ಸ್ವಚ್ಚ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗೌರವ ಅಂಕೋಲಾದ ಪ್ರತಿಯೊಬ್ಬರಿಗೆ ಸಲ್ಲುತ್ತದೆ ಎಂದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಕೋಲಾ ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ ಮಾತನಾಡಿ ಬಸ್ ನಿಲ್ದಾಣದ ಎಲ್ಲ ಸಿಬ್ಬಂದಿಗಳು, ಪ್ರಯಾಣಿಕರು, ಸಾರ್ವಜನಿಕರು ಹಾಗೂ ಕುಶಲಕರ್ಮಿಗಳ ನಿಸ್ವಾರ್ಥ ಸೇವೆಯಿಂದ ಇಂದು ಅಂಕೋಲಾ ಬಸ್ ನಿಲ್ದಾಣಕ್ಕೆ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಲಭಿಸಿದೆ. ಇದೇ ಪ್ರೇರಣೆಯಿಂದ ಮುಂದೆ ರಾಜ್ಯದಲ್ಲಿಯೇ ಮಾದರಿ ಬಸ್ ನಿಲ್ದಾಣವನ್ನಾಗಿ ಮಾಡುವ ಕನಸು ಹೊಂದಿದ್ದು ಆ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದರು.

    ಪತ್ರಕರ್ತ ಸುಭಾಷ್ ಕಾರೇಬೈಲ್ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಸಹಾಯಕ ಕಾರ್ಯ ಅಧೀಕ್ಷಕ ಹರೀಶ ಖಾರ್ವಿ, ಸಿಬ್ಬಂದಿ ಮೇಲ್ವಿಚಾರಕ ಡಿ.ಎನ್. ನಾಯ್ಕ, ಸಿಬ್ಬಂದಿಗಳಾದ ರಾಜೇಶ ನಾಯ್ಕ, ವೇದಾ ನಾಯ್ಕ, ರವಿ ನಾಯ್ಕ, ಎಸ್.ವಿ.ಆಚಾರಿ, ಚಾಲಕ- ನಿರ್ವಾಹಕರು, ಪ್ರಯಾಣಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top