Slide
Slide
Slide
previous arrow
next arrow

ಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು: ವಿಠ್ಠಲ ಆಗೇರ

300x250 AD

ಅಂಕೋಲಾ: ಶಿಕ್ಷಕರು ಸದಾ ಅಧ್ಯಯನಶೀಲರಾಗಿ, ಮಕ್ಕಳ ಮುಗ್ಧ ಮನಸ್ಸನ್ನು ಗೆದ್ದು ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಸ್ಫೂರ್ತಿದಾಯಕರಾಗಬೇಕು ಎಂದು ನಗರದ ಜೈಹಿಂದ್ ಹೈಸ್ಕೂಲಿನ ವಿಶ್ರಾಂತ ಮುಖ್ಯಾಧ್ಯಾಪಕ ವಿಠ್ಠಲ ಆಗೇರ ಆಶಿಸಿದರು.
ಅವರು ಸಿಟಿ ಲಯನ್ಸ್ ಕ್ಲಬ್ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಸಿಟಿ ಲಯನ್ಸ್ ಅಧ್ಯಕ್ಷರಾದ ಡಾ.ಎಂ.ವಿಜಯದೀಪ, ಶಿಕ್ಷಕರು ನಿರಂತರ ಗೌರವಿಸಬೇಕಾದ ಪ್ರತ್ಯಕ್ಷ ದೇವರು ಉತ್ತಮ ಸಮಾಜದಲ್ಲಿ ಸತ್‌ಪ್ರಜೆಗಳಾಗಿ ನಿರ್ಮಿಸುವ ಶಿಲ್ಪಿಗಳು ಎಂದರು.

ಡಾ.ರಾಧಾಕೃಷ್ಣನ್‌ರ ಭಾವಚಿತ್ರಕ್ಕೆ ಗೌರವ ಸಮರ್ಪಣಾ ಮೂಲಕ ಪ್ರಾರಂಭಗೊ0ಡ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕುಮಟಾ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಅನಿತಾ ಚಂದ್ರಶೇಖರ, ಕುಮಟಾ ಹೆಣ್ಣುಮಕ್ಕಳ ವಿಶ್ರಾಂತ ಶಿಕ್ಷಕಿ ಸೀತಾಬಾಯಿ ಆರ್. ಕಾಮತ ಮತ್ತು ಜನಮೆಚ್ಚಿದ ಶಿಕ್ಷಕಿ ವಿಜಯಲಕ್ಷ್ಮಿ ಜಿ.ಭಟ್ ಅವರನ್ನು ಫಲ-ತಾಂಬೂಲ ನೀಡಿ ಶಾಲೂ ಹೊದಿಸಿ ಸತ್ಕರಿಸಲಾಯಿತು.
ಕಾರ್ಯದರ್ಶಿ ಪ್ರದೀಪ ರಾಯ್ಕರ್, ಖಜಾಂಚಿ ಉದಯಾನಂದ ನೇರಲಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನ ಎಸ್.ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ನೀತಾ ಮಹಾಲೆ, ಸುಬ್ರಹ್ಮಣ್ಯ ರೇವಣಕರ ಮತ್ತು ಸುರೇಶ ಡಿ.ನಾಯ್ಕ ಸನ್ಮಾನಿತರ ಮಾನಪತ್ರ ವಾಚಿಸಿದರು. ಮಾಯಾ ಶೆಟ್ಟಿ, ಕೃಷ್ಣಾನಂದ ಶೆಟ್ಟಿ, ಬೀರಾ ಬೋರಕರ, ಕಮಲಾಕರ ಬೋರಕರ, ಗಣಪತಿ ಹೆಗಡೆ, ಬೀರಾ ಬೋರಕರ, ಕಮಲಾಕರ ಬರ‍್ಕರ, ಗಣಪತಿ ಹೆಗಡೆ, ಅಶ್ವಿನಿ ಸಾಮಂತ, ಜಯಲಕ್ಷ್ಮಿ ಎಂ. ಶೆಟ್ಟಿ, ಶಶಿಧರ ಶೇಣ್ವಿ ಹಾಜರಿದ್ದು ಸಹಕರಿಸಿದರು. ಡಾ.ಶಾಂತಾರಾಮ ಶಿರೋಡ್ಕರ, ನಾರಾಯಣ ಎಚ್.ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top