• Slide
    Slide
    Slide
    previous arrow
    next arrow
  • ಸದೃಢ ಯುವಶಕ್ತಿಯಿಂದ ಭಾರತಕ್ಕೆ ವಿಶ್ವಗುರು ಪಟ್ಟ: ಡಾ.ಮೀನಾ ಚಂದಾವರಕರ

    300x250 AD

    ಕುಮಟಾ: ಯುವಶಕ್ತಿಯ ಸಂಪನ್ಮೂಲವನ್ನು ಈ ದೇಶ ಸೇವೆಯಲ್ಲಿ ವ್ಯಯ ಮಾಡಬೇಕಾಗಿದೆ. ಭಾರತ ದೇಶವೆಂಬ ಸುಂದರ ಮನೆಯನ್ನು ಯುವಶಕ್ತಿಯೆಂಬ ಆಲೋಚನೆಯಿಂದ ಕಟ್ಟಬೇಕಾಗಿದೆ. ಶೇ 28ರಷ್ಟಿದ್ದ ಯುವಜನ ಭಾರತವನ್ನು ವಿಶ್ವಗುರು ಮಟ್ಟಕ್ಕೇರಿಸಬಹುದೆಂದು ಬಿವಿವಿಎಸ್ ಸಂಘ ಬಾಗಲಕೋಟೆಯ ಮುಖ್ಯ ಸಲಹೆಗಾರರು ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳೂ ಆದ ಡಾ.ಮೀನಾ ಚಂದಾವರಕರ ಅಭಿಪ್ರಾಯಪಟ್ಟರು.
    ಅವರು ಇಲ್ಲಿಯ ಸಮೀಪದ ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆಯ ಗುರುಪ್ರಸಾದ ಇಂಟರ‍್ಯಾಕ್ಟ್ ಕ್ಲಬ್ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯ ಅಂಗ ಸಂಸ್ಥೆ ಇಂಟರ‍್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು, ನಾಯಕತ್ವ, ಸಂವಹನದ0ತಹ ಗುಣಗಳೇ ಇಂದಿನ ಮಕ್ಕಳನ್ನು ಭಾವೀ ರಾಷ್ಟ್ರನಾಯಕರನ್ನಾಗಿ ಮಾಡುತ್ತವೆಂಬುದನ್ನು ಸವಿಸ್ತಾರವಾಗಿ ಉದಾಹರಣೆಗಳ ಮೂಲಕ ಯುವಚೇತನರಿಗೆ ವಿವರಿಸಿದರು.

    ರೋಟರಿ ಇಂಟ್ರ‍್ಯಾಕ್ಟ್ ಕ್ಲಬ್ ಸಂಚಾಲಕ ಸದಸ್ಯ ಹರೀಶ್ ಹೆಗಡೆ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಬೋಧಿಸಿದರು. ಇಂಟರ‍್ಯಾಕ್ಟ್ ಅಧ್ಯಕ್ಷೆ ಸೌಜನ್ಯಾ ನಾಯ್ಕ ತಮ್ಮ ತಂಡವನ್ನು ಪರಿಚಯಿಸಿ ನಿಷ್ಠೆಯಿಂದ ಸೇವಾ ಕಾರ್ಯಕ್ಕೆ ಕೈಜೋಡಿಸುವುದಾಗಿ ತಿಳಿಸಿದರು. ಹಿರಿಯ ರೋಟೇರಿಯನ್ ಅರುಣ ಉಭಯಕರ, ಛಾಯಾ ಉಭಯಕರ, ಕಾಂಚನಾ ಹೊನ್ನಾವರ ಮಾತನಾಡಿದರು. ಇನ್ನೋರ್ವ ಸದಸ್ಯೆ ಡಾ.ಶ್ರೀದೇವಿ ಭಟ್ ಇಂಟರ‍್ಯಾಕ್ಟರ್ ಅವರ ಕಾರ್ಯಚಟುವಟಿಕೆಗನ್ನು ಪ್ರಸ್ಥಾಪಿಸಿ ಕಾರ್ಯಕ್ರಮ ಸಂಯೋಜನೆಯನ್ನು ವಿವರಿಸಿದರು. ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
    ರೋಟರಿ ಅಧ್ಯಕ್ಷ ಎನ್.ಆರ್.ಗಜು ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಮುಖ್ಯಾಧ್ಯಾಪಿಕೆ ವಿಜಯಲಕ್ಷ್ಮಿ ಜಿ. ಭಟ್ ಸ್ವಾಗತಿಸಿದರು. ಇಂಟರ‍್ಯಾಕ್ಟ್ ಸಲಹೆಗಾರ ಶಿಕ್ಷಕ ರಾಜು ಲಮಾಣಿ ವಂದಿಸಿದರು. ಅಶ್ವಿನ್, ಸೂರಜ್ ಉಭಯಕರ ಹಾಗೂ ಶಿಕ್ಷಕವರ್ಗದವರು ಉಪಸ್ಥಿತರಿದ್ದರು. ಶಿಕ್ಷಕಿ ಜಯಾ ಎಂ.ನಾಯ್ಕ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಡಾ.ಮೀನಾ ಚಂದಾವರಕರ ಅವರನ್ನು ಕುಮಟಾ ರೋಟರಿ ಪರವಾಗಿ ಸನ್ಮಾನಿಸಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top