ದಾಂಡೇಲಿ: ನಗರ ಪೊಲೀಸ್ ಠಾಣೆಯ ಆಶ್ರಯದಡಿ ನಗರದ ಅಂಬೇಡ್ಕರ್ ಭವನದಲ್ಲಿ ಸೈಬರ್ ಅಪರಾಧ ತಡೆಯ ಕುರಿತಂತೆ ಜಾಗೃತಿ ಮತ್ತು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಕುರಿತಂತೆ ಶಾಂತಿ ಸಭೆ ನಡೆಯಿತು.
ಪಿಎಸ್‌ಐ ಐ.ಆರ್.ಗಡ್ಡೇಕರ್ ಸಭೆಯಲ್ಲಿ ಮಾತನಾಡಿ, ಆಧುನಿಕತೆ ಬೆಳೆಯುತ್ತಿದ್ದಂತೆಯೇ ಇಂದು ಸೈಬರ್ ಅಪರಾಧ ಚಟುವಟಿಕೆಗಳು ವ್ಯಾಪಕವಾಗತೊಡಗಿವೆ. ಅನೇಕ ಜನರು ಹಣವನ್ನು ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಸಾಮಾಜಿಕ ಜಾಲತಾಣವನ್ನು ಯೋಗ್ಯ ರೀತಿಯಲ್ಲಿ ಬಳಸಬೇಕೆ ವಿನಃ ಅದರ ದುರ್ಬಳಕೆ ಮಾಡಿದಾಗ ಸಮಾಜಘಾತುಕ ಚಟುವಟಿಕೆಗಳು ನಡೆಯಲು ಸಾಧ್ಯ ಎಂದರು.
ಬ್ಯಾAಕಿನ ಹೆಸರಿನಲ್ಲಿ ಕರೆ ಮಾಡಿ ಓಟಿಪಿ ಪಡೆದು ಹಣ ವಂಚಿಸುವoತಹ ಘಟನೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿರಬೇಕು. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಓಟಿಪಿ ಸಂಖ್ಯೆ ಕೇಳಿದಾಗ ಅಂತಹ ಸಂದರ್ಭದಲ್ಲಿ ಇಲಾಖೆಯ ಗಮನಕ್ಕೆ ತನ್ನಿ, ಇಲ್ಲವೇ ನಿಮ್ಮ ವ್ಯವಹಾರವಿರುವ ಬ್ಯಾಂಕನ್ನು ಸಂಪರ್ಕಿಸಬೇಕು. ಸೈಬರ್ ಅಪರಾಧಗಳು ಎಗ್ಗಿಲ್ಲದೇ ನಡೆಯುವುದನ್ನು ನಿಯಂತ್ರಿಸಬೇಕಾದರೇ ಮೊದಲು ನಾವು ಜಾಗೃತರಾಗಬೇಕು. ಇಡೀ ಸಮಾಜವೇ ಜಾಗೃತವಾದಾಗ ಸೈಬರ್ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಬರಲಿರುವ ಸಾರ್ವಜನಿಕ ಗಣೇಶೋತ್ಸವ ಕಾರ‍್ಯಕ್ರಮಗಳನ್ನು ಶಿಸ್ತುಬದ್ಧವಾಗಿ ಮತ್ತು ಶಾಂತಿಯುತವಾಗಿ ಆಚರಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪೊಲೀಸ್ ಸಿಬ್ಬಂದಿಗಳಾದ ಮಹಾದೇವ ಬಳೇಗಾರ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದ ಕಾರ್ಯಕ್ರಮಕ್ಕೆ ಬಸವರಾಜ್ ತೇಲ್ಸಂಗ ಸ್ವಾಗತಿಸಿದರು. ಪರಶುರಾಮ ನಾಗರಾಳ ಅವರು ವಂದಿಸಿದರು. ವೇದಿಕೆಯಲ್ಲಿ ನಗರಸಭಾ ಸದಸ್ಯ ವಿಜಯ್ ಕೋಳೆಕರ್, ಮಾಜಿ ನಗರಸಭಾ ಸದಸ್ಯ ಫಿರೋಜ್ ಖಾನ್ ಬಾಲೆಖಾನ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದ0, ಸಾಂತ್ವನ ಮಹಿಳಾ ಕೇಂದ್ರದ ಬಸವಂತಮ್ಮ ಅವರು ಉಪಸ್ಥಿತರಿದ್ದರು.