ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರಾವಣ ಮಾಸದ ನಿಮಿತ್ತ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಏಕಾದಶ ರುದ್ರಾಭಿಷೇಕ, ಸುವರ್ಣ ಶಂಖ, ಗಂಗಾಜಲಾಭಿಷೇಕ, ಪಂಚಾಮೃತ, ನವಧಾನ್ಯಾಭಿಷೇಕದೊಂದಿಗೆ ವಿಶೇಷ ಪೂಜೆ ನಡೆಯಿತು. ಇದನ್ನು ಆತ್ಮಲಿಂಗಕ್ಕೆ ಬಿಲ್ವಾರ್ಚನೆ ಸುವರ್ಣ ನಾಗಭರಣ ಅಲಂಕಾರದೊAದಿಗೆ ವಿಶೇಷ ನೈವೇದ್ಯಗಳನ್ನು ಅರ್ಪಿಸಿ ದೀಪಾರಾಧನೆ, ಮಹಾಮಂಗಳಾರತಿ ನಡೆಯಿತು. ಅಮೃತೇಶ್ವರ ಭಟ್ ಹಿರೇ ಇದನ್ನು ನೆರವೇರಿಸಿಕೊಟ್ಟರು.
ಲೋಕಕಲ್ಯಾಣಾರ್ಥವಾಗಿ ಗೋಕರ್ಣದಲ್ಲಿ ವಿಶೇಷ ಪೂಜೆ
