Slide
Slide
Slide
previous arrow
next arrow

ಸ್ವಚ್ಛತೆಗಾಗಿ ಒಂದು ಹೆಜ್ಜೆ ಜನಾಂದೋಲನ ಆಯೋಜನೆ: ಕಾಗೇರಿ

300x250 AD

ಸಿದ್ದಾಪುರ: ಪ್ರಕೃತಿ ಎನ್ನುವದು ನಮಗೆ ದೊರೆತ ಬಳುವಳಿಯಲ್ಲ. ನಾವು ಮುಂದಿನ ಪೀಳೆಗೆಯಿಂದ ಪಡೆದ ಸಾಲ. ಆ ಋಣವನ್ನು ತೀರಿಸುವ ನಿಟ್ಟಿನಲ್ಲಿ ಪಂಡಿತ ದೀನದಯಾಳ ಟ್ರಸ್ಟ ಗಾಂಧಿ ಜಯಂತಿಯ0ದು ಸ್ವಚ್ಛತೆಗಾಗಿ ಒಂದು ಹೆಜ್ಜೆ ಎನ್ನುವ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಶಿರಸಿಯ ಪಂ.ದೀನದಯಾಳ ಟ್ರಸ್ಟ್ ನೇತೃತ್ವದಲ್ಲಿ ಪಟ್ಟಣದ ರಾಘವೇಂದ್ರ ಮಠದ ಸಭಾಭವನದಲ್ಲಿ ಆಯೋಜಿಸಿದ ಸ್ವಚ್ಛತೆಗಾಗಿ ಒಂದು ಹೆಜ್ಜೆ ಕಾರ್ಯಕ್ರಮದ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈ ಕಾರ್ಯಕ್ರಮದ ಕುರಿತಂತೆ ಗ್ರಾಪಂ ವ್ಯಾಪ್ತಿಯ ಎಲ್ಲ ಸಂಘ- ಸಂಸ್ಥೆಗಳ ಪ್ರಮುಖರ ಸಭೆ ಕರೆದು ಕಾರ್ಯಕ್ರಮ ರೂಪಿಸುವದು, ಕಸ ಸಂಗ್ರಹಣೆ, ಅದರ ವಿಲೇವಾರಿಯ ಕಾರ್ಯ ಮುಂತಾದವುಗಳ ಬಗ್ಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವದು ಎಲ್ಲರ ಜವಾಬ್ದಾರಿ. ಇದೊಂದು ಸ್ವಪ್ರೇರಣೆಯಿಂದ ಪಾಲ್ಗೊಳ್ಳುವ ಕಾರ್ಯಕ್ರಮ. ಇದು ಕೇವಲ ಬಿಜೆಪಿಯ ಅಭಿಯಾನವಲ್ಲ. ಸರಕಾರ, ಜನಪ್ರತಿನಿಧಿಗಳು, ಎಲ್ಲ ಸಂಘಸ0ಸ್ಥೆಗಳು ಸ್ಪಂದನೆ ನೀಡಬೇಕು ಎಂದರು.
ಬಿಜೆಪಿಮoಡಲ ಅಧ್ಯಕ್ಷ ಮಾರುತಿ ನಾಯ್ಕ, ಪ್ರಮುಖರಾದ ರವಿ ಹೆಗಡೆ ಹೂವಿನಮನೆ ಮಾತನಾಡಿದರು. ಈಶ್ವರ ನಾಯ್ಕ ಮನಮನೆ,ತಿಮ್ಮಪ್ಪ ಎಂ.ಕೆ., ಗುರುರಾಜ ಶಾನಭಾಗ,ನಂದನ ಬರ‍್ಕರ,ತೋಟಪ್ಪ ನಾಯ್ಕ, ಕೆ.ಆರ್.ವಿನಾಯಕ, ವಿಜೇತ ಗೌಡರ್ ಮುಂತಾದವರಿದ್ದರು. ಮಹಾಬಲೇಶ್ವರ ಹೆಗಡೆ ಕಾನಸೂರು ಸ್ವಾಗತಿಸಿದರು. ಆದರ್ಶ ಪೈ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top